ಸೋಮವಾರ, ಸೆಪ್ಟೆಂಬರ್ 27, 2021
21 °C
ರಾಜ್ಯಮಟ್ಟದ ಕಾರ್ಯಾಗಾರವನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿದ ಡಾ.ಜಿ. ಪರಮೇಶ್ವರ್‌

ಸಾಮಾಜಿಕ ಪಿಡುಗುಗಳ ನಿವಾರಣೆಗೆ ಯುವಜನರು ಯತ್ನಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶವನ್ನು ಕಾಡುತ್ತಿರುವ ಬಡತನ, ಅಜ್ಞಾನ ಹಾಗೂ ಜಾತಿಯತೆಗಳು ವಿದ್ಯೆ, ಪ್ರಜ್ಞಾವಂತಿಕೆಯಿಂದ ನಿವಾರಣೆಯಗುತ್ತವೆ ಎಂಬ ನಿರೀಕ್ಷೆ ಈಡೇರಿಲ್ಲ. ದೇಶದ ಬೆಳವಣಿಗೆ ಕುಂಠಿತಗೊಳಿಸುತ್ತಿರುವ ಈ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಯುವಜನರು ಪ್ರಯತ್ನಿಸಬೇಕು ಎಂದು ಕಾಂಗ್ರೆಸ್‌ ನಾಯಕ ಡಾ. ಜಿ. ಪರಮೇಶ್ವರ್ ಹೇಳಿದರು.

ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್ ಯುವ ಸೈನ್ಯ ದಾವಣಗೆರೆ ಘಟಕವು ನಗರದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಬಲವರ್ಧನೆಗಾಗಿ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ’, ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಅವರು ಮಾತನಾಡಿದರು.

ದೇಶ ಕಟ್ಟಬೇಕಾದ ಯುವಕರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಅವರು ದಾರಿ ತಪ್ಪುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಕಾಣುವ ನಿರೀಕ್ಷೆ ಸಾಕಾರವಾಗದೇ ಜೀವನ ಮುಗಿಯುತ್ತಿದೆ ಎಂದು ವಿಷಾದಿಸಿದರು.

ಯುವ ಸೈನ್ಯದ ಗೌರವ ಅಧ್ಯಕ್ಷರು ಮುರಳಿಧರ ಹಾಲಪ್ಪ, ‘ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಸಾಮರ್ಥ್ಯ ತೋರಿದ್ದರು. ಆದರೂ ಬೆನ್ನಿಗೆ ಚೂರಿ ಹಾಕುವ ಹುನ್ನಾರದಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರನ್ನಾಗಿ ಮಾಡಲಾಯಿತು. ಚುನಾವಣೆಯಲ್ಲಿ ಸೋತವರನ್ನು ಬೇರೆ ಕ್ಷೇತ್ರದಿಂದ ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ ಉದಾಹರಣೆಗಳಿವೆ. ಪರಮೇಶ್ವರ್ ಅವರಿಗೆ ಅಂತಹ ಅವಕಾಶ ದೊರೆಯಲಿಲ್ಲ’ ಎಂದು ತಿಳಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಯುವಸೈನ್ಯದ ನಗುತಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಮುರಳಿಧರ, ಹಾಲಪ್ಪ, ನಜೀರ್, ಅತಿಕ್‌ ಅಹಮದ್, ರುದ್ರಮುನಿ, ಜಿಲ್ಲಾ ಛಲವಾದಿ ಮಹಾ ಸಭಾದ ಅಧ್ಯಕ್ಷ ಎಸ್. ಶೇಖರಪ್ಪ, ಡಾ.ಜಗನ್ನಾಥ್, ಪ್ರೊ ರಾಚಯ್ಯ, ವಸಂತಪ್ಪ ಹದಡಿ, ಮಂಜುನಾಥ್ ಮೈಸೂರು, ನರಸಿಂಹ ಮೂರ್ತಿ ತುಮಕೂರು ಅವರೂ ಇದ್ದರು.

ಜಿಲ್ಲಾ ಅಧ್ಯಕ್ಷರು ಎಂ. ಹಾಲೇಶ್, ಗೌರವ ಸಲಹೆಗಾರ ಎಚ್. ನವೀನ್ ಕುಮಾರ್, ಉಪಾಧ್ಯಕ್ಷ ಟಿ.ಕೆ. ಹಾಲೇಶ್, ಹನುಮಂತಪ್ಪ ಐಗೂರು, ಪ್ರಕಾಶ್ ಮಂಡಲೂರು, ಪಕ್ಕೀರಪ್ಪ ಭಾತಿ, ನಾಗರಾಜ್ ಶಾಮನೂರು, ಹನುಮಂತಪ್ಪ ಕಕ್ಕರಗೊಳ್ಳ, ತಿಪ್ಪೇಶ್ ಬೇತೂರು, ಮಜುನಾಥ ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.