ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಗಿಲು ಮುಟ್ಟುವ ಜನರ ಕೇಕೆ..ಮೈನವಿರೇಳಿಸುವ ಜಟ್ಟಿಗಳ ಕಾದಾಟ..

ಚಂದ್ರಶೇಖರ ಆರ್.
Published 18 ಮಾರ್ಚ್ 2024, 6:13 IST
Last Updated 18 ಮಾರ್ಚ್ 2024, 6:13 IST
ಅಕ್ಷರ ಗಾತ್ರ

ದಾವಣಗೆರೆ: ಜಟ್ಟಿಗಳು ತೊಡೆ ತಟ್ಟುವ ಶಬ್ದ. ಕೆಂದೂಳಿನಲ್ಲಿ ಪಟ್ಟು ಹಾಕಿ ಎದುರಾಳಿಗೆ ಮಣ್ಣು ಮುಕ್ಕಿಸುವ ಸೆಣಸು. ಮುಗಿಲು ಮುಟ್ಟುವ ಬೆಂಬಲಿಗರ ಕೇಕೆ, ಚಪ್ಪಾಳೆಯ ಸದ್ದು. ಗೆಲ್ಲುವ ಪೈಲ್ವಾನರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಅಭಿಮಾನಿಗಳು...

ಇವು ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದಾವಣಗೆರೆಯ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ಕಂಡುಬರುವ ರೋಮಾಂಚನಕಾರಿ ‌ದೃಶ್ಯಗಳು.

ಎರಡು ವರ್ಷಗಳಿಗೆ ಒಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಯಲ್ಲಿ ‘ಕುಸ್ತಿ ಪಂದ್ಯಾವಳಿ’ ಪ್ರಮುಖ ಆಕರ್ಷಣೆ. ಈ ಬಾರಿ ಮಾರ್ಚ್‌ 22ರಿಂದ 24ರವರೆಗೆ ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಪೈಲ್ವಾನರು ಕುಸ್ತಿಯ ರಸದೌತಣವನ್ನು ನೋಡುಗರಿಗೆ ಉಣಬಡಿಸಲಿದ್ದಾರೆ.

ಕುಸ್ತಿ ಪಂದ್ಯಕ್ಕೆ ರಾಜ್ಯ, ಹೊರ ರಾಜ್ಯಗಳ ಪೈಲ್ವಾನರೂ ಬರುತ್ತಾರೆ. ಜಟ್ಟಿಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಕುಸ್ತಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಂಜಾಬ್‌, ದೆಹಲಿ, ಹರಿಯಾಣ, ಮಹಾರಾಷ್ಟ್ರ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಕುಸ್ತಿ ಪೈಲ್ವಾನರು ಭಾಗವಹಿಸಲಿದ್ದಾರೆ.

2 ಕೆ.ಜಿಯ ಬೆಳ್ಳಿ ಗದೆ ಬಹುಮಾನ: 

‘ಜಂಗಿ ಕುಸ್ತಿಯಲ್ಲಿ ಗೆದ್ದ ಪೈಲ್ವಾನರಿಗೆ 2 ಕೆ.ಜಿಯ ಬೆಳ್ಳಿ ಗದೆ ಬಹುಮಾನ ಇದೆ. ಪ್ರಸಿದ್ಧ ಜೋಡಿಗಳಿಗೆ ಬೆಳ್ಳಿ ಗದೆ ಹಾಗೂ ₹ 25,000 ಬಹುಮಾನ ನೀಡಲಾಗುವುದು’ ಎಂದು ಕುಸ್ತಿ ಪಂದ್ಯದ ಆಯೋಜಕರು ತಿಳಿಸಿದ್ದಾರೆ.

ಕೊನೆಯ ದಿನ ನಡೆಯುವ ನಂಬರ್‌–1 ಕುಸ್ತಿಯನ್ನು ನೋಡಲು ಹೊರ ಜಿಲ್ಲೆಗಳ ಜನರು ಬರುತ್ತಾರೆ. ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ನಡೆದಿದೆ. ಪೈಲ್ವಾನರಿಗೆ ಹಾಗೂ ಕುಸ್ತಿ ವೀಕ್ಷಿಸಲು ಬರುವವರಿಗೆ ಪಿ.ಬಿ. ರಸ್ತೆಯ ಅಭಿನವ ರೇಣುಕ ಮಂದಿರದಲ್ಲಿ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿದೆ. 

ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ
ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ
ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ
ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

ಟಗರು ಕಾಳಗದಲ್ಲಿ ಸೆಣಸಾಡುತ್ತಿರುವ ಟಗರುಗಳು

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ರೋಚಕ ಟಗರು ಕಾಳಗ...

ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಇಲ್ಲಿನ ದೇವರಾಜ ಅರಸು ಬಡಾವಣೆಯ ಶಾಲಾ ಮೈದಾನದಲ್ಲಿ  ಎರಡು ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ‘ಟಗರಿನ ಕಾಳಗ’ ಗಮನ ಸೆಳೆಯಿತು.

ಓಡಿ ಬಂದು ಪರಸ್ಪರ ಡಿಚ್ಚಿ ಹೊಡೆಯುತ್ತಿದ್ದ ಟಗರುಗಳು ತೋರುತ್ತಿದ್ದ ‘ಪೊಗರು’ ನೋಡುಗರನ್ನು ರೋಮಾಂಚನಗೊಳಿಸಿತು. ಮಾರ್ಚ್‌ 14 15ರಂದು ‌ಮರಿಕುರಿ ಎರಡು ಹಾಗೂ ನಾಲ್ಕು ಹಲ್ಲು ಮತ್ತು 8 ಹಲ್ಲಿನ ಟಗರುಗಳು ಸೆಣಸಾಡಿದವು. ಟಗರುಗಳು ಡಿಚ್ಚಿ ಹೊಡೆಯುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.  ಟಗರುಗಳ ಮೇಲೆ ಶಾಲು ಹಾಗೂ ವಸ್ತ್ರಗಳನ್ನು ಹೊದಿಸಿಕೊಂಡು ರಾಜ ಮರ್ಯಾದೆಯಿಂದ ಕರೆದುಕೊಂಡು ಬರುತ್ತಿದ್ದ ಮಾಲೀಕರು ವಸ್ತ್ರ ತೆಗೆದು ಕಾಳಗಕ್ಕೆ ಬಿಡುತ್ತಿದ್ದರು.

ಟಗರುಗಳ ಕಾದಾಟಕ್ಕೆ ಅಪಾರ ಸಂಖ್ಯೆಯ ಜನಸ್ತೋಮ ಸಾಕ್ಷಿಯಾಯಿತು. ಗೆದ್ದ ಟಗರಿನ ಮಾಲೀಕರು ಸಂಭ್ರಮಿಸಿದರೆ ಸೋತ ಟಗರಿನ ಮಾಲೀಕರು ನಿರಾಸೆಯಿಂದ ತೆರಳಿದರು. ದುರ್ಗಾಂಬಿಕಾ ಕುರಿ ಕಾಳಗ ಸಮಿತಿ (ಉಮೇಶ್‌ ರಾವ್‌ ಸಾಳಂಕಿ ಜೆ.ಡಿ. ಪ್ರಕಾಶ್‌ ಕರಿಗಾರ ಬಸಪ್ಪ ಕೆ. ಪರಶುರಾಮ ಉಮೇಶಣ್ಣ ಕುಮಾರ್ ಪೈಲ್ವಾನ್‌ ಹಾಗೂ ಸದಸ್ಯರು) ಯಿಂದ ಕಾಳಗ ಆಯೋಜಿಸಲಾಗಿತ್ತು.

ಹರಿಹರದ ‘ಗಜನಿ’ ಪ್ರಥಮ 8 ಹಲ್ಲು ವಿಭಾಗದಲ್ಲಿ ಹರಿಹರದ ಗಜನಿ ಹೆಸರಿನ ಟಗರು ಪ್ರಥಮ ಸ್ಥಾನ ಪಡೆಯಿತು. ( ₹ 2.5 ಲಕ್ಷ ಬಹುಮಾನ) ದಾವಣಗೆರೆಯ ದುರ್ಗಾಂಬಿಕಾ ಭೀಮ ದ್ವಿತೀಯ (₹ 1.25 ಲಕ್ಷ ಬಹುಮಾನ) ಛತ್ರಪತಿ ಜೈಭವಾನಿ ತೃತೀಯ (₹ 60000) ಗಾಂಧಿನಗರದ ಅಪ್ಪುರಾಜ್‌ ನಾಲ್ಕನೇ ಸ್ಥಾನ (₹ 30000) ಪಡೆದವು. 4 ಹಲ್ಲು ವಿಭಾಗದಲ್ಲಿ ಕಮದೋಡು ಜಾಕಿ ಹೆಸರಿನ ಟಗರು ಪ್ರಥಮ (₹ 50000) ಬಹುಮಾನ ಪಡೆದರೆ  ಚಂದ್ರಗುತ್ತಮ್ಯ ಬೆಳ್ಳೂಡಿ ಸಲಗ ದ್ವಿತೀಯ (₹ 30000) ಪ್ರಕೃತಿ ಪ್ರಿಯಾ ತೃತೀಯ (₹ 20000) ಹಾಗೂ ಟಿ.ವಿ. ಸ್ಟೇಷನ್‌ ಭೂತ ನಾಲ್ಕನೇ ( ₹ 10000) ಬಹುಮಾನ ಪಡೆದು ನಗೆ ಬೀರಿದವು. ಎರಡು ಹಲ್ಲಿನ ಕುರಿ ಕಾಳಗದಲ್ಲಿ ರಾಕಿಂಗ್‌ ಸ್ಟಾರ್ ಕೆಎಂಆರ್‌ ಪ್ರಥಮ ಬಹುಮಾನ ₹ 40000 ಮರಿಚುಕ್ಕಿ  (ದ್ವಿತೀಯ₹ 8000) ಚೌಡೇಶ್ವರಿ ಭೂತ ಪ್ರಸನ್ನ (ತೃತೀಯ ₹ 20000 ) ಹಾಗೂ ಬಂಬೂ ಬಜಾರ್‌ ರಿಟರ್ನ್‌ ಬ್ರೂಸ್ಲಿ ನಾಲ್ಕನೇ (₹ 10000) ಬಹುಮಾನ. ಮರಿ ಕುರಿ ವಿಭಾಗದಲ್ಲಿ ಹುಚ್ಚೆಂಗೆಮ್ಮ ಪ್ರಸನ್ನ ಪ್ರಥಮ (₹ 20000) ಬಹುಮಾನ ಪಡೆಯಿತು. ದುರ್ಗಾ ಪರಮೇಶ್ವರಿ (ದ್ವಿತೀಯ–₹ 15000) ದುರ್ಗಾಶಕ್ತಿ ಕಾಳಿ (ತೃತೀಯ– ₹ 10000) ಹದಡಿ ಡಾನ್‌ ನಾಲ್ಕನೇ–₹ 5000 ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT