ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ತಾಲ್ಲೂಕಿನಾದ್ಯಂತ ಶಿವರಾತ್ರಿ ವಿಶೇಷ ಪೂಜೆ; ಸಾಲುಗಟ್ಟಿದ ಭಕ್ತರು

Published 8 ಮಾರ್ಚ್ 2024, 16:26 IST
Last Updated 8 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಹರಿಹರ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಯಿತು.

ನಗರದ ವಿವಿಧ ದೇವಸ್ಥಾನ, ಮಂದಿರಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ನಿಮಿತ್ತ ದೇವಸ್ಥಾನಗಳಲ್ಲಿ ಶಿವ ನಾಮ ಸ್ಮರಣೆ ಹಾಗೂ ಭಜನೆ, ಕೀರ್ತನೆಯನ್ನು ಮಾಡುವ ಮೂಲಕ ರಾತ್ರಿಯಿಡಿ ಶಿವಧ್ಯಾನ ಮಾಡಲಾಯಿತು.

ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಗಮಿಕರ ನೇತೃತ್ವದ ಅರ್ಚಕರ ತಂಡ ಅಭಿಷೇಕ ಆರಂಭಿಸಿದ್ದು, ಶನಿವಾರ ಸೂರ್ಯೋದಯ ಆವಾಗುವವರೆಗೆ ಮುಂದುವರಿಯಲಿದೆ. ಅಭಿಷೇಕದ ವೇಳೆ ವಿವಿಧ ಸಂಸ್ಥೆಗಳು, ಭಕ್ತರು ಹಾಲು, ಪ್ರಸಾದ ವಿತರಿಸಿದರು. ಭಕ್ತರ ತಂಡದಿಂದ ಭಜನೆ, ಭರತನಾಟ್ಯ ಕಾರ್ಯಕ್ರಮ ನಡೆದವು.

ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವಸಂದೇಶ ಧ್ವಜಾರೋಹಣ ನೆರವೇರಿಸಿದ ನಂತರ ಜ್ಯೋತಿರ್ಲಿಂಗ ದರ್ಶನ ಶೋಭಾಯಾತ್ರೆ ನಡೆಯಿತು. ಹೊಸ ಭರಂಪುರದಲ್ಲಿರುವ 108 ಲಿಂಗೇಶ್ವರ, ನೀರು ಸರಬರಾಜು ಕೇಂದ್ರ ಸಮೀಪದ ಜೋಡು ಬಸವೇಶ್ವರ, ಹೊಸ ಹರ್ಲಾಪುರದ ಬಸವೇಶ್ವರ, ಕೈಲಾಸ ನಗರದ ಸಂಗಮೇಶ್ವರ, ದೇವಾಲಯಗಳಲ್ಲಿ ಅಭಿಷೇಕ, ರುದ್ರಾಭಿಷೇಕ ಮಾಡಿ ನಂತರ ವಿವಿಧ ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸುವ ಮೂಲಕ ಶಿವರಾತ್ರಿ ಆಚರಣೆಗೆ ಚಾಲನೆ ನೀಡಲಾಯಿತು.

ಕಸಬಾ ಮತ್ತು ಮಾಹಜೇನಹಳ್ಳಿಯ ಗ್ರಾಮದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರ ಸಾಲಲ್ಲಿ ನಿಂತು ದೇವರದರ್ಶನ ಪಡೆದರು. ಸಂಜೆಯಾಗುತ್ತಿದ್ದಂತೆ ನಗರದ ದೇವಸ್ಥಾನಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದು ಪುನೀತರಾದರು.

ಶಿವರಾತ್ರಿ ನಿಮಿತ್ತ ಗುರುವಾರ ಮತ್ತು ಶುಕ್ರವಾರ ನಗರದ ಹೂ, ಹಣ್ಣು, ತರಕಾರಿ, ದಿನಸಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT