ಮಲೇಬೆನ್ನೂರು: 2026-27ನೇ ಸಾಲಿಗೆ ಪಟ್ಟಣದ ಪುರಸಭೆಯ ₹4.37 ಲಕ್ಷ ಉಳಿತಾಯ ಬಜೆಟ್ ಅನ್ನು ಪ್ರಭಾರ ಅಧ್ಯಕ್ಷೆ ಸುಮಯ್ಯಾ ಬಾನು ಶನಿವಾರ ಮಂಡಿಸಿದರು. ವಿವಿಧ ಮೂಲಗಳಿಂದ ₹19.56 ಕೋಟಿ ಆದಾಯ, ₹19.51 ಕೋಟಿ ವೆಚ್ಚ ಪ್ರಸ್ತಾಪಿಸಲಾಗಿದೆ.

‘ಸಿ.ಸಿ. ರಸ್ತೆ, ಚರಂಡಿ, ಡೆಕ್ ನಿರ್ಮಾಣ, ವಾರ್ಡ್ಗಳ ನಾಮಫಲಕ ಅಳವಡಿಸುವ ದೂರದೃಷ್ಟಿ ಇಟ್ಟು ಆಯವ್ಯಯ ತಯಾರಿಸಲಾಗಿದೆ. ಕಂದಾಯ ವಸೂಲಾತಿ, ಸಂಪನ್ಮೂಲ ಕ್ರೋಡೀಕರಣ, ಸಂತೆ ಮೈದಾನದ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಸರಬರಾಜು ಹಾಗೂ ಕಚೇರಿ ವೆಚ್ಚ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಸುಮಯ್ಯಾ ಬಾನು ತಿಳಿಸಿದರು.

ಘನ ತ್ಯಾಜ್ಯ ಸಂಗ್ರಹ, ವಿಲೇವಾರಿ ಘಟಕ ಸ್ಥಾಪನೆ, ಸ್ಮಶಾನ ಅಭಿವೃದ್ಧಿ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಸದಸ್ಯರ ಕೌಶಲಾಭಿವೃದ್ಧಿ ತರಬೇತಿ, ವಸತಿ ರಹಿತರನ್ನು ಗುರುತಿಸುವುದು, ರಸ್ತೆ ಬದಿ ಸಸಿ ನೆಡುವುದು, ಅಂತರ್ಜಲ ಮಟ್ಟ ಹೆಚ್ಚಳ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಲು ಪುರಸಭೆ ಹಣಕಾಸು ಒದಗಿಸಲಿದೆ ಎಂದರು.

ಜಾತ್ರಾ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಪುರಸಭೆ ಸನ್ನದ್ಧವಾಗಿರಬೇಕು ಎಂದು ಶಾಸಕ ಬಿ.ಪಿ. ಹರೀಶ್ ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಖಾನ್, ಸದಸ್ಯರು, ಸಿಬ್ಬಂದಿ ಇದ್ದರು. ಶಿವರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.