ದಾವಣಗೆರೆ: ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮ ಪಂಚಾಯಿತಿಯ ಮಳಲಹಳ್ಳಿ ಗ್ರಾಮದಲ್ಲಿ ನಿಷೇಧಿತ ತಳಿಯಾದ ಆಫ್ರಿಕನ್ ಕ್ಯಾಟ್‌ಫಿಶ್ ನಾಶ ಮಾಡುವ ಪ್ರಕ್ರಿಯೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ಆರಂಭವಾಯಿತು.

ಗ್ರಾಮದ ಗೌರಮ್ಮ ಹಾಗೂ ರಾಮನಗೌಡ ಅವರಿಗೆ ಸೇರಿದ ಸರ್ವೆ ನಂ 19 ಮತ್ತು 21/1ರಲ್ಲಿ 10.37 ಎಕರೆ ಜಮೀನಿನಲ್ಲಿ ಪ್ರದೇಶದಲ್ಲಿ 8 ಕೆರೆಗಳಲ್ಲಿ ಮೀನನ್ನು ಸಾಕಣೆ ಮಾಡಿದ್ದು, ಅವುಗಳನ್ನು ಗುತ್ತಿಗೆದಾರರೊಬ್ಬರಿಗೆ ನೀಡಲಾಗಿತ್ತು.

ಮೀನುಗಾರಿಕೆ ಇಲಾಖೆಯ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ಆರಂಭಿಸಲಾಗಿದೆ. ಮೂರು ದಿನಗಳಲ್ಲಿ ಕಾರ್ಯಾಚರಣೆ ಮುಗಿಯುತ್ತದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಉಪವಿಭಾಗಾಧಿಕಾರಿ ಮಾಹಿತಿ ನೀಡಿದರು.

ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ಮೀನುಗಾರಿಕೆ ಅಧಿಕಾರಿ ಗಣೇಶ್ ಇದ್ದರು.

ಕ್ಯಾಟ್‌ಫಿಶ್ ನಿಷೇಧ ಏಕೆ?

ಪರಿಸರ ಹಾಗೂ ಮನುಷ್ಯರ ಆರೋಗ್ಯಕ್ಕೆ ಮಾರಕ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಭಾರತದಲ್ಲಿ ಕ್ಯಾಟ್‌ಫಿಶ್ ಸಾಗಣೆ ಹಾಗೂ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರ್ನಾಟಕದಲ್ಲಿಯೂ 2013ರಲ್ಲಿ ಈ ಮೀನಿಗೆ ಸರ್ಕಾರ ನಿಷೇಧ ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.