ಬುಧವಾರ, ಮಾರ್ಚ್ 22, 2023
19 °C

ಮಂತ್ರಮಾಂಗಲ್ಯ ವಿವಾಹವಾದ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಕಾಲೊನಿಯಲ್ಲಿ ಶುಕ್ರವಾರ ವಧು–ವರರು ‘ಮಂತ್ರಮಾಂಗಲ್ಯ’ ಪದ್ಧತಿಯಲ್ಲಿ ವಿವಾಹ ಮಾಡಿಕೊಳ್ಳುವ ಮೂಲಕ ಗಮನ ಸೆಳೆದರು.

ಬೆಣ್ಣಿಹಳ್ಳಿ ಗ್ರಾಮದ ವೈ.ಬಸವರಾಜ್ ಮತ್ತು ಹಿರೇಮೇಗಳಗೆರೆ ಗ್ರಾಮದ ಎ.ಸುಧಾ (ವೇದಶ್ರೀ) ಅವರೇ ರಾಷ್ಟ್ರಕವಿ ಕುವೆಂಪು ಅವರ ಮಂತ್ರಮಾಂಗಲ್ಯದ ಸಪ್ತ ಸೂತ್ರ ಹಾಗೂ ಅಂಬೇಡ್ಕರ್‌ ತತ್ವಗಳನ್ನು ಓದಿ, ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಬುದ್ಧ–ಬಸವ–ಅಂಬೇಡ್ಕರ್‌ ಹಾಗೂ ಕುವೆಂಪು ಅವರ ಭಾವಚಿತ್ರದ ಮುಂದೆ ನಿಂತು ಮಂತ್ರಮಾಂಗಲ್ಯ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ವಿವಾಹದ ನೆನಪಿಗಾಗಿ ಮನೆಯ ಮುಂದೆ ತೆಂಗಿನಸಸಿ ನೆಟ್ಟರು.

ಹಾಳ್ಯಾದ ಚೌಡಪ್ಪ ದೊಡ್ಡರಾಮಪ್ಪ ದಂಪತಿಗಳ ಪುತ್ರ ಬಸವರಾಜ್ ಅವರು ಎಂ.ಎ. ಪದವೀಧರರಾಗಿದ್ದು, ಚಿತ್ರದುರ್ಗದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿರೆಮೇಗಳಗೆರೆ ಗ್ರಾಮದ ಹಾಲಮ್ಮ, ಆಲದಹಳ್ಳಿ ರಾಮಪ್ಪ ಅವರ ಪುತ್ರಿ ಎ.ಸುಧಾ ಅವರು ಬಿ.ಎ. ಪದವಿ ಪಡೆದಿದ್ದಾರೆ. ಶುಕ್ರವಾರ ಮಧ್ಯಾಹ್ನ ವರನ ಮನೆಯ ಮುಂದೆಯೇ ಹಾಕಿದ್ದ ಹಂದರದ ಕೆಳಗೆ ಮಂತ್ರಮಾಂಗಲ್ಯ ನಡೆಯಿತು.

ಬಳಿಕ ಮಾತನಾಡಿದ ವೈ. ಬಸವರಾಜ್, ‘ನಾನು ಗೌತಮ ಬುದ್ಧ ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ ವಿಚಾರಧಾರೆಗಳನ್ನು ಪಾಲನೆ ಮಾಡುತ್ತಿ
ದ್ದೇನೆ. ನನ್ನ ಮದುವೆ ಮಂತ್ರ
ಮಾಂಗಲ್ಯದ ಮೂಲಕವೇ ನಡೆಯ
ಬೇಕು ಎಂಬ ಇಚ್ಛೆಯನ್ನು ನಮ್ಮ ಮನೆಯವರು ಮತ್ತು ವಧುವಿನ ತಂದೆ–ತಾಯಿಗೆ ಮನವರಿಕೆ ಮಾಡಿಕೊಟ್ಟಾಗ ಎಲ್ಲರೂ ಒಪ್ಪಿ ಸಹಕರಿಸಿದರು. ವಿಭಿನ್ನವಾದ ವಿವಾಹ ಆಗಿದ್ದು,
ತುಂಬಾ ಸಂತಸ ತಂದಿದೆ’ ಎಂದು ಹೇಳಿದರು.

ಎಂ.ಸಿ. ಮೋಹನ್ ಕುಮಾರ್ ಅವರು ಅಂಬೇಡ್ಕರ್‌ ಬೋದ್ ಮಂತ್ರ ಮಾಂಗಲ್ಯ ಮಾಡಿಸಿದರು. ಆರ್.ಶಿವಶಂಕರ್, ಎಚ್.ಮಂಜುನಾಥ್, ಟಿ.ಶಿವಣ್ಣ, ಜಿ.ರಾಮಪ್ಪ, ಜಿ.ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.