ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಾಯಕೊಂಡ ಗ್ರಾಮ ಪಂಚಾಯಿತಿ- 12 ಮಂದಿ ಆಯ್ಕೆ

Last Updated 31 ಡಿಸೆಂಬರ್ 2021, 4:59 IST
ಅಕ್ಷರ ಗಾತ್ರ

ದಾವಣಗೆರೆ: ಮಾಯಕೊಂಡ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. 12 ಸ್ಥಾನಗಳಿಗೆ ಆಯ್ಕೆ ನಡೆದಿದೆ.

ಮಾಯಕೊಂಡ 1ನೇ ವಾರ್ಡ್‌ನಿಂದ ಮೂವರ ಆಯ್ಕೆ ನಡೆಯಬೇಕಿತ್ತು. 8 ಮಂದಿ ಕಣದಲ್ಲಿದ್ದರು. ಹಿಂದುಳಿದ ವರ್ಗ ‘ಬಿ’ಯ ಮಲ್ಲಿಕಾರ್ಜುನ ಎಂ., ಸಾಮಾನ್ಯ ಮಹಿಳೆ ಸುನೀತಾ ಎ.ಆರ್‌., ಸಾಮಾನ್ಯ ವರ್ಗದ ಬಿ. ಲಕ್ಷ್ಮಣ ಆಯ್ಕೆಯಾದರು.

ಮಾಯಕೊಂಡ 2ನೇ ವಾರ್ಡ್‌ಗೆ ಮೂವರ ಆಯ್ಕೆಯಾಗಬೇಕಿತ್ತು. ಐವರು ಕಣದಲ್ಲಿದ್ದರು. ಹಿಂದುಳಿದ ವರ್ಗ ‘ಎ’ಯಿಂದ ಮೈತ್ರಮ್ಮ, ಸಾಮಾನ್ಯ ಮಹಿಳೆ ಜಿ.ಸಿ. ಪುಷ್ಪ, ಸಾಮಾನ್ಯ ವರ್ಗದಿಂದ ಎಂ.ಎನ್‌. ಮಂಜುನಾಥ ವಿಜಯ ಗಳಿಸಿದರು.

ಮಾಯಕೊಂಡ 3ನೇ ವಾರ್ಡ್‌ಗೆ ಇಬ್ಬರ ಆಯ್ಕೆಯಾಗಬೇಕಿತ್ತು. ನಾಲ್ವರು ಕಣದಲ್ಲಿದ್ದರು. ಅನುಸೂಚಿತ ಪಂಗಡದ ಎಸ್‌.ಆರ್‌. ಬಸವರಾಜಪ್ಪ, ಸಾಮಾನ್ಯ ಮಹಿಳೆ ನಾಗಮ್ಮ ವಿಜೇತರಾದರು.

ಮಾಯಕೊಂಡ 4ನೇ ವಾರ್ಡ್‌ಗೆ ಒಬ್ಬರು ಸದಸ್ಯರಾಗಬೇಕಿದ್ದು, ಇಬ್ಬರು ಕಣದಲ್ಲಿದ್ದರು. ಸಾಮಾನ್ಯ ವರ್ಗದ ಜಿ. ನಾಗಪ್ಪ ಆಯ್ಕೆಯಾದರು.

ಮಾಯಕೊಂಡ 5ನೇ ವಾರ್ಡ್‌ನ ಒಂದು ಸದಸ್ಯ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಅನುಸೂಚಿತ ಜಾತಿಯ ಹನುಮಂತಪ್ಪ ಗೆದ್ದರು.

ಮಾಯಕೊಂಡ 6ನೇ ವಾರ್ಡ್‌ಗೆ ಇಬ್ಬರ ಆಯ್ಕೆಯಾಗಬೇಕಿತ್ತು. ಐವರು ಕಣದಲ್ಲಿದ್ದರು. ಅನುಸೂಚಿತ ಜಾತಿ ಮಹಿಳೆ ಶಿವಮ್ಮ, ಸಾಮಾನ್ಯ ವರ್ಗದಲ್ಲಿ ಮಲ್ಲಪ್ಪ ಆಯ್ಕೆಯಾದರು ಎಂದು ತಹಶೀಲ್ದಾರ್‌ ಗಿರೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT