ಮಂಗಳವಾರ, ಅಕ್ಟೋಬರ್ 4, 2022
26 °C
ಚನ್ನಗಿರಿ: ತಾಲ್ಲೂಕು ಕಚೇರಿಯ ಮಿನಿ ವಿಧಾನಸೌಧಕ್ಕೆ ಕಾಯಕಲ್ಪ

ಮಿನಿ ವಿಧಾನಸೌಧ: ಕಾಮಗಾರಿ ಚುರುಕು

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಇಲ್ಲಿನ ತಾಲ್ಲೂಕು ಕಚೇರಿ ಇರುವ ಮಿನಿ ವಿಧಾನಸೌಧದ ಕಟ್ಟಡಕ್ಕೆ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದೆ. ನವೀಕರಣ ಹಾಗೂ ಮೂರನೇ ಮಹಡಿಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲು ಸಜ್ಜಾಗುತ್ತಿದೆ.

ಪ್ರಸ್ತುತ ತಾಲ್ಲೂಕು ಕಚೇರಿ ಕಟ್ಟಡವನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಹಳೆಯ ಕಟ್ಟಡದಲ್ಲಿ ಎರಡು ಮಹಡಿಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ನೋಂದಣಿ, ಸರ್ವೆ, ಕಂದಾಯ, ತಾಲ್ಲೂಕು ಖಜಾನೆ, ಶಾಸಕರ ಜನಸಂಪರ್ಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಕಟ್ಟಡವನ್ನು ನಿರ್ಮಿಸಿ 30 ವರ್ಷಗಳಾಗಿದ್ದರಿಂದ ಕೊಠಡಿಗಳು ಮಳೆಗಾಲದಲ್ಲಿ ಸೋರಲು ಆರಂಭಿಸಿದ್ದವು. ಇದರಿಂದ ಕಚೇರಿಗಳಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿತ್ತು.

ಕಟ್ಟಡ ನವೀಕರಣ ಹಾಗೂ
3ನೇ ಮಹಡಿಯ ನಿರ್ಮಾಣ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆಗಾಗಿ ತಹಶೀಲ್ದಾರ್ ಅವರು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಶಾಸಕರು ಕಾಮಗಾರಿಗಾಗಿ ಕಳೆದ ಜುಲೈನಲ್ಲಿ ₹ 1.90 ಕೋಟಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡಿದ್ದರಿಂದ ಈಚೆಗೆ ಕಾಮಗಾರಿ
ಆರಂಭಗೊಂಡಿದೆ.

‘ಮಿನಿ ವಿಧಾನಸೌಧದ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿದ್ದವು. ಸಾರ್ವಜನಿಕರು ಕುಳಿತುಕೊಳ್ಲೂ ಸೂಕ್ತ ಆಸನಗಳ ವ್ಯವಸ್ಥೆ ಇರಲಿಲ್ಲ. ಈಗ 3ನೇ ಮಹಡಿ ಹಾಗೂ ಮೂಲ ಸೌಕರ್ಯ ಒದಗಿಸಲು ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ’ ಎಂದು ಪಟ್ಟಣದ ನಿವಾಸಿ ವಿ. ನಾಗರಾಜ್
ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು