ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರ ತೆರೆಯಲು ಸಂಸದ ಒತ್ತಾಯ

7

ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರ ತೆರೆಯಲು ಸಂಸದ ಒತ್ತಾಯ

Published:
Updated:

ದಾವಣಗೆರೆ: ಜಿಲ್ಲೆಯ 10 ಕಡೆಗಳಲ್ಲಿ ಬೆಂಬಲ ಬೆಲೆಯ ಭತ್ತದ ಖರೀದಿ ಕೇಂದ್ರ ತೆರೆಯಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.

2017–18ನೇ ಸಾಲಿನ ಬೆಳೆದ ಭತ್ತವನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರವು ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲು ಆದೇಶಿಸಿದೆ. ಆದರೆ ಅತಿ ಹೆಚ್ಚು ಭತ್ತ ಬೆಳೆಯುವ ದಾವಣಗೆರೆ, ಕೊಪ್ಪಳ, ಶಿವಮೊಗ್ಗ ಜಿಲ್ಲೆಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರಿಗೆ ಅನ್ಯಾಯ ಮಾಡ ಹೊರಟಿದೆ ಎಂದು ಟೀಕಿಸಿದರು.

ಮೂರು ಹಂಗಾಮಿನಲ್ಲಿ ಬರಗಾಲದ ಕಾರಣದಿಂದ ಈ ಭಾಗದಲ್ಲಿ ರೈತರು ಭತ್ತವನ್ನೆ ಬೆಳೆಯಲಾಗಿರಲಿಲ್ಲ. ಆದರೆ ಈ ಬೇಸಿಗೆಯ ಬೆಳೆಯಲ್ಲಿ ರೈತರು ಬೆಳೆದಿರುವ ಭತ್ತಕ್ಕೆ ಸರಿಯಾದ ಬೆಲೆ ದೊರಕದೆ ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಲಿಗೆ ಕನಿಷ್ಠ ₹ 2 ಸಾವಿರ ಇರಬೇಕಾಗಿದ್ದ ಬೆಲೆ ಈಗ ₹ 1,300ಕ್ಕೆ ಇಳಿದಿದೆ. ರೈತರಿಗೆ ಭತ್ತ ಬೆಳೆದ ಖರ್ಚೂ ಬರುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಜಿಲ್ಲೆಯ ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ ತಾಲ್ಲೂಕುಗಳಲ್ಲಿ ಕನಿಷ್ಠ ಹತ್ತು ಕಡೆ ಭತ್ತದ ಖರೀದಿ ಕೇಂದ್ರ ತೆರೆಯಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !