ಹೊನ್ನಾಳಿ: ರೋಗಿಯ ನೋವಿಗೆ ಸ್ಪಂದಿಸುವವನೇ ನಿಜವಾದ ವೈದ್ಯ ಎಂದು ಡಾ.ಎಚ್.ಪಿ.ರಾಜ್ಕುಮಾರ್ ಹೇಳಿದರು.

ಶನಿವಾರ ಭಾರತೀಯ ವಿದ್ಯಾಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಂಡರೆ ಉತ್ತಮ ನಾಗರಿಕರಾಗಬಹುದು ಎಂದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ. ಜಗದೀಶ್ ಮಾತನಾಡಿ, ಶಾಲೆಗಳಲ್ಲಿಯೇ ವೈದ್ಯರ ದಿನಾಚರಣೆ ಮಾಡುವ ಹಿಂದೆ ನಮ್ಮ ಸ್ವಾರ್ಥವಿದೆ. ನಾಳೆ ನಮ್ಮ ಸಮಾಜಕ್ಕೆ ಅತ್ಯುತ್ತಮ ವೈದ್ಯರುಗಳೂ ದೊರೆಯಲಿ ಎಂಬ ಆಶಯ ನಮ್ಮದಾಗಿದೆ ಎಂದರು.

ಕತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.

ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 182ನೇ ರ್ಯಾಂಕ್ ಪಡೆದ ಹೊನ್ನಾಳಿಯ ಉತ್ಸವ್ ಸಿ. ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಎಚ್. ಲಿಂಗಯ್ಯ, ಎಚ್.ಎಂ. ಅರುಣ್ಕುಮಾರ್, ಹಾಲೇಶ್ ಕುಂಕೋದ್, ಡಾ. ಮಹಾದೇವ ದೇಶಿ, ಡಾ.ನರೇಂದ್ರ, ಡಾ. ಎಲ್.ಎಚ್. ಚಿದಾನಂದ, ಡಾ.ಮಂಜುನಾಥ್, ಡಾ. ದೇವರಾಜ್, ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರಾದ ಪ್ರಕಾಶ್ ಹೆಬ್ಬಾರ್, ದತ್ತಾತ್ರೇಯ ವೈಶ್ಯರ, ಪಿ.ಬಿ. ಶೈಲೇಶ್, ಮುಖ್ಯಶಿಕ್ಷಕರಾದ ಎಂ.ಕೆ. ಪುನೀತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.