ಸಾಸ್ವೆಹಳ್ಳಿ: "ವಿದ್ಯಾರ್ಥಿ ಜೀವನದಲ್ಲಿಯೇ 'ಏಕೆ, ಏನು, ಹೇಗೆ' ಎಂಬ ಪ್ರಶ್ನೆಗಳು ಮೂಡಬೇಕು. ಇಂತಹ ಕುತೂಹಲದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತವೆ," ಎಂದು ಮುಖ್ಯ ಶಿಕ್ಷಕ ವಸಂತ ಬಡಿಗೇರ ತಿಳಿಸಿದರು.

ಸಮೀಪದ ಬೆನಕನಹಳ್ಳಿಯ ವಿನಾಯಕ ಪ್ರೌಢಶಾಲೆಯ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ವಿದ್ಯಾರ್ಥಿಗಳ ಕಲಿಕೆ ಶಾಶ್ವತವಾಗಬೇಕಾದರೆ ಅದು ಸ್ವಯಂ ಕಲಿಕೆಯಾಗಬೇಕು. ಇಂದಿನ ಜೀವನದಲ್ಲಿ ವಿಜ್ಞಾನಿಗಳ ಮನಸ್ಥಿತಿಯ ಬಗ್ಗೆ ವಿದ್ಯಾರ್ಥಿ ಹಂತದಲ್ಲಿಯೇ ಅರಿವು ಮೂಡಬೇಕು. ವಿಜ್ಞಾನ ವಸ್ತುಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ವಿವಿಧ ಮಾದರಿಗಳು, ಚಿತ್ರಪಟಗಳು ಹಾಗೂ ಪ್ರಯೋಗಗಳನ್ನು ಸಿದ್ಧಪಡಿಸಿ ಇತರರೊಂದಿಗೆ ಹಂಚಿಕೊಳ್ಳುವುದರಿಂದ ಕಲಿತ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ," ಎಂದರು.

ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ವಿಜ್ಞಾನ ಮಾದರಿಗಳು, ಪ್ರಯೋಗಗಳು ಮತ್ತು ಚಿತ್ರಪಟಗಳ ಪ್ರದರ್ಶನ ಗಮನ ಸೆಳೆಯಿತು. ಪಿಎಂಶ್ರೀ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಮಂಜನ ಗೌಡ್ರು, ಶಿಕ್ಷಕರು, ತರಳುಬಾಳು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳಾದ ದಿವ್ಯಾ ಟಿ.ಎಂ, ಮಮತಾ ಎಂ.ಟಿ, ಸುಧಾಕರ ಜಿ, ಸ್ವಾಮಿ ಡಿ.ಆರ್ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.