ಭಾನುವಾರ, ಏಪ್ರಿಲ್ 2, 2023
31 °C
ಗಂಗಗೊಂಡನಹಳ್ಳಿ: ಸಂಸದರಿಂದ ಭೂಮಿಪೂಜೆ

ಗ್ರಾಮದ ಅಭಿವೃದ್ಧಿಗೆ ₹ 10.79 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಗಂಗಗೊಂಡನಹಳ್ಳಿ (ಚನ್ನಗಿರಿ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಪ್ರತಿ ಗ್ರಾಮಗಳಲ್ಲೂ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ತಾಲ್ಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ನಿರ್ಮಿಸಿರುವ ಸಂಪರ್ಕ ರಸ್ತೆಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘₹ 3.75 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. 6 ವರ್ಷದವರೆಗೆ ಈ ರಸ್ತೆಯ ಮೇಲುಸ್ತುವಾರಿಯನ್ನು ಗುತ್ತಿಗೆದಾರರು ನಿರ್ವಹಣೆ ಮಾಡುತ್ತಾರೆ. ಆನಂತರ ರಸ್ತೆಗೆ ಮರು ಡಾಂಬರೀಕಣ ಕಾರ್ಯವನ್ನು ಗುತ್ತಿಗೆದಾರರೇ ಮಾಡಿಕೊಡುತ್ತಾರೆ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬರುತ್ತಿದ್ದು, ಪಕ್ಷಕ್ಕೆ ಬೆಂಬಲವನ್ನು ನೀಡಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಿದ್ಧ’ ಎಂದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ಗ್ರಾಮದ ಕೆರೆಗೆ ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿಗೆ ₹ 5 ಕೋಟಿ, ಜಲ್ ಮಿಷನ್ ಯೋಜನೆಗೆ ₹ 49 ಲಕ್ಷ, ಕೂಡು ರಸ್ತೆಗೆ ₹ 2 ಕೋಟಿ, ಕೆರೆ ಅಭಿವೃದ್ಧಿಗೆ ₹ 1 ಕೋಟಿ, ರೈತರ ಜಮೀನುಗಳಿಗೆ ಹೋಗುವ ರಸ್ತೆಗೆ ₹ 1 ಕೋಟಿ, ದೇವಸ್ಥಾನಕ್ಕೆ ₹ 5 ಲಕ್ಷ, ಜಮ್ಮಾಪುರ ರಸ್ತೆಗೆ ₹ 1.86 ಕೋಟಿ ಸೇರಿ ಈ ಗ್ರಾಮವೊಂದಕ್ಕೆ ₹ 10.79 ಕೋಟಿ ಅನುದಾನ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಪರಮೇಶ್ವರಪ್ಪ, ಉಪಾಧ್ಯಕ್ಷೆ ಅನುಸೂಯಮ್ಮ ದೇವರಾಜ್, ಗುತ್ತಿಗೆದಾರರಾದ ಪರಮೇಶ್, ಎಂ.ಜಿ.ಕೆ. ಮಂಜಪ್ಪ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರವಿಕುಮಾರ್, ಪ್ರಕಾಶ್, ಜಗದೀಶ್, ಶ್ವೇತಾ, ದಿನೇಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.