ಗುರುವಾರ , ಡಿಸೆಂಬರ್ 5, 2019
24 °C
ಅನಾರೋಗ್ಯದ ಕಾರಣಕ್ಕೆ ರಜೆ ಹಾಕಿದ್ದಕ್ಕೆ ಈ ಕ್ರಮ: ಆರೋಪ

ಶಾಲೆಗೆ ಸೇರಿಸಲಿಲ್ಲ: ವಿದ್ಯಾರ್ಥಿನಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಅನಾರೋಗ್ಯದ ಕಾರಣದಿಂದ 12 ದಿನ ಶಾಲೆಗೆ ಹೋಗಲಾಗಿಲ್ಲ. ಆರೋಗ್ಯ ಸುಧಾರಿಸಿದ ಬಳಿಕ ತರಗತಿಗೆ ಬಂದರೆ ಶಾಲೆಗೆ ಬರಬೇಡ ಎಂದು ಕಳುಹಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಸೋಮವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾಳೆ.

ಮೋತಿವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್‌ ವಿಭಾಗದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ನೇಹಾ ಎಂಬಾಕೆ ತನ್ನ ತಾಯಿಯ ಜತೆಗೆ ಬಂದು ದೂರು ನೀಡಿದಳು.

ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ‘ವಿದ್ಯಾರ್ಥಿನಿಯನ್ನು ಶಾಲೆಗೆ ಕೂಡಲೇ ಕಳುಹಿಸಿ. ಏನು ಸಮಸ್ಯೆ ನೋಡಿ’ ಎಂದು ಅಲ್ಲೇ ಇದ್ದ ಶಿಕ್ಷಣ ಇಲಾಖೆಯವರಿಗೆ ಸೂಚನೆ ನೀಡಿದರು.

ನಂತರ ಆಕೆಯನ್ನು ಶಾಲೆಗೆ ಕಳುಹಿಸಿಕೊಡಲಾಗಿದ್ದು, ಸೇರಿಸಿಕೊಳ್ಳಲಾಗಿದೆ.

‘ಮದುವೆಗೆ ಹೋಗಲು ಆಕೆಯ ತಾಯಿ ಎರಡು ವಾರಗಳ ಹಿಂದೆ ಕರೆದುಕೊಂಡು ಹೋಗಿದ್ದರು. ಆನಂತರ ಶಾಲೆಗೆ ಬಂದಿಲ್ಲ. ಇವತ್ತು ಶಾಲೆಗೆ ಬಂದವಳನ್ನು ಮನೆಗೆ ನಾವು ಕಳುಹಿಸಿಯೇ ಇಲ್ಲ. ಶಾಲೆಗೆ ಬರುವ ಮೊದಲೇ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬಂದಿರಬೇಕು. ಶಿಕ್ಷಣ ಇಲಾಖೆಯವರೂ ಈ ಬಗ್ಗೆ ವಿಚಾರಿಸಿದರು’ ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕಲ್ಪಿತರಾಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)