ಸೋಮವಾರ, ಏಪ್ರಿಲ್ 12, 2021
29 °C

ದಾವಣಗೆರೆ: ನಾಳೆಯಿಂದ ನೋಟು, ನಾಣ್ಯಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರೋಟರಿ ಕ್ಲಬ್‌ನಿಂದ ಮಾ.6, 7ರಂದು ಇಲ್ಲಿನ ಎಂಸಿಸಿ ‘ಎ’ ಬ್ಲಾಕ್‌ನಲ್ಲಿನ ದಾವಣಗೆರೆ–ಹರಿಹರ ಅರ್ಬನ್ ಬ್ಯಾಂಕ್‌ನ ಸಮುದಾಯ ಭವನದಲ್ಲಿ ನೋಟುಗಳು ಹಾಗೂ ನಾಣ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ಮೇಯರ್ ಎಸ್.ಟಿ. ವೀರೇಶ್ ಪ್ರದರ್ಶನ
ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ್ ಗಿರೀಶ್, ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.

ಇದೊಂದು ಅಪೂರ್ವ ಪ್ರದರ್ಶನವಾಗಿದ್ದು, ಬೆಳಗಾವಿಯ ಈರಪ್ಪ ಗುರುಲಿಂಗ ಪರಮಶೆಟ್ಟಿ ಅವರು 5 ದಶಕಗಳಿಂದ ಸಂಗ್ರಹಿಸಿರುವ ಅಪರೂಪದ ನೋಟುಗಳು ಹಾಗೂ ನಾಣ್ಯಗಳು ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡಿವೆ. 1 ರೂಪಾಯಿಯಿಂದ 1 ಸಾವಿರ ರೂಪಾಯಿಗಳ ಹಳೆಯ ಬೆಳ್ಳಿ ನಾಣ್ಯಗಳು ಪ್ರದರ್ಶನದಲ್ಲಿರಲಿವೆ. ಬ್ರಿಟಿಷರ ಆಡಳಿತದ, ಮರಾಠಾ, ಪೇಶ್ವೆ, ಮೊಘಲರು, ನಿಜಾಮರು ಹಾಗೂ ಟಿಪ್ಪು ಆಡಳಿತದ ನಾಣ್ಯಗಳು ಪ್ರದರ್ಶನದಲ್ಲಿ ಇರಲಿವೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಅಂದನೂರು ಆನಂದಕುಮಾರ್, ವಿಕಾಸ್ ಕುಮಾರ್ ಸಂಘ್ವಿ ಇದ್ದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು