ನ್ಯಾಮತಿ: ರಾಷ್ಟ್ರದ ಏಕತೆಯನ್ನು ಕಾಪಾಡುವಲ್ಲಿ ವಲ್ಲಭಭಾಯ್ ಪಟೇಲ್ ಅವರ ಕೊಡುಗೆ ಅಪಾರ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್. ರವಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ, ಕೆಪಿಎಸ್ ಶಾಲೆ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪಟೇಲರ ಆದರ್ಶ ಮತ್ತು ದಿಟ್ಟತನವನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಅವರು ಜಾಥಕ್ಕೆ ಚಾಲನೆ ನೀಡಿದರು.

ಪೊಲೀಸ್ ಠಾಣೆ ವತಿಯಿಂದ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೆ.ವಿಜಯ (ಪ್ರಥಮ), ಸಿಂಚನಾ (ದ್ವಿತೀಯ) ಮತ್ತು ಬಿ.ಬಿ.ಶಾರದಾ (ತೃತೀಯ) ಅವರನ್ನು ಗೌರವಿಸಲಾಯಿತು.

ಉಪನ್ಯಾಸಕ ನವುಲೆ ಗಂಗಾಧರ, ಸಾಮಾಜಿಕ ಕಾರ್ಯಕರ್ತ ಸತೀಶ ಬಿದರಕಟ್ಟೆ, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ, ಉಪಾಧ್ಯಕ್ಷೆ ಎಂ.ಎಸ್.ಭಾರತಿ, ನಗರ ಘಟಕದ ಅಧ್ಯಕ್ಷ ಜಿ.ಲೋಕೇಶ, ಹೊಸಮನೆ ಮಲ್ಲಿಕಾರ್ಜುನ, ಎಸ್.ಎನ್.ಗೋಪಾಲನಾಯ್ಕ, ನಿತಿನ್, ಯುನೂಷ್ಪಾಷ, ಕರ್ನಲ್ಲಿ ಗಂಗಾಧರ, ನುಚ್ಚಿನ ಸುಧೀರ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.