ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಿಗೆ ಶರಣಾದ ಅಭ್ಯರ್ಥಿಗಳು

ಸೊರಕೆ, ಲಾಲಾಜಿ ಅವರಿಂದ ನಾಮಪತ್ರ ಸಲ್ಲಿಕೆ
Last Updated 24 ಏಪ್ರಿಲ್ 2018, 12:29 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ವಿನಯಕುಮಾರ್ ಸೊರಕೆ ಹಾಗೂ ಬಿಜೆಪಿ ಅಭ್ಯರ್ಥಇ ಲಾಲಾಜಿ ಆರ್.ಮೆಂಡನ್ ಅವರು ಸೋಮವಾರ ನಾಮಪತ್ರ ಸಲ್ಲಿಕೆಗೂ ಮುನ್ನ ವಿವಿಧ ಧಾರ್ಮಿಕ  ಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ದೇವರ ಆಶೀರ್ವಾದ ಪಡೆದ ಬಳಿಕ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಉಡುಪಿಗೆ ತೆರಳಿದರು.  ವಿನಯಕುಮಾರ್ ಸೊರಕೆ ಅವರು ಮಂಗಳೂರು ಕದ್ರಿ ಮಂಜುನಾಥೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಕಾಪು ಜನಾರ್ದನ ದೇವಸ್ಥಾನ, ಕಾಪು ಮಾರಿಗುಡಿಯಲ್ಲಿ ಪ್ರಾರ್ಥಿಸಿದರು.  ಅಲ್ಲಿಂದ ಕಾಪು ಪೊಲಿಪು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿನ  ವಿದ್ಯಾರ್ಥಿಗಳಿಗೆ  ಸಿಹಿ ತಿಂಡಿ ಹಂಚಿದರು. ಕಟಪಾಡಿಯ ವಿಶ್ವನಾಥ ಕ್ಷೇತ್ರ, ವೆಂಕಟರಮಣ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಉದ್ಯಾವರ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಉಡುಪಿಯ ಬಿಷಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಲಾಲಾಜಿ ಮೆಂಡನ್: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರು ಬೆಂಬಲಿಗರೊಂದಿಗೆ ಉಡುಪಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಕಾಪುವಿನ ಮಾರಿಗುಡಿ, ಕೊಪ್ಪಲಂಗಡಿಯ ವಾಸುದೇವ ದೇವಸ್ಥಾನ, ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿ ಅಲ್ಲಿಂದ ನೂರಾರು ಕಾರ್ಯಕರ್ತರ ಜೊತೆ ಪಕ್ಷದ ಕಚೇರಿಯಿಂದ ಮೆರವಣಿಗೆ ಮೂಲಕ ಉಡುಪಿಗೆ ತೆರಳಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಐದು ವರ್ಷಗಳ ದುರಾಡಳಿತದಿಂದ ಜನ ಬೇಸತ್ತಿದ್ದು ನಡೆಸಿದ್ದು, ಭ್ರಷ್ಟ ಮತ್ತು ಹತ್ಯಾಕಾಂಡ ಸರ್ಕಾರ. ಈ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆ, ಸಮಸ್ಯೆ ತಂದೊಡ್ಡಿದೆ. ಕಟ್ಟಡ ರಚನೆಗೆ ಕಚ್ಚಾ ಸಾಮಗ್ರಿ ನಿರ್ಬಂಧದಿಂದಾಗಿ ದುಡಿದು ತಿನ್ನುವ ಕೂಲಿ ಕಾರ್ಮಿಕರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಿದೆ. ಕಾಪು ಪುರಸಭೆಯಲ್ಲಿ ಅಭಿವೃದ್ಧಿ ಪ್ರಾಧಿಕಾರ ಕಟ್ಟಡ ಕಟ್ಟಲು ಸತಾಯಿಸುತ್ತಿದೆ. ಹೆಜಮಾಡಿ ಮೀನುಗಾರಿಕಾ ಬಂದರು ಬಗ್ಗೆ ಸರ್ಕಾರ ಇಷ್ಟು ವರ್ಷವಾದರೂ ಮನಸ್ಸು ಮಾಡಿಲ್ಲ ಎಂದರು. ಅಲ್ಲದೆ ಮತದಾರರು ಬಿಜೆಪಿಯನ್ನು ಬಹುಮತದಿಂದ ಈ ಬಾರಿ ಗೆಲ್ಲಿಸುತ್ತಾರೆ ಎಂದರು.

ಟಿಕೆಟ್ ಆಕಾಂಕ್ಷಿಯಾಗಿದ್ದ ಸುರೇಶ್ ಶೆಟ್ಟಿ ಗುರ್ಮೆ ಅವರ ಬಗ್ಗೆ ಕೇಳಿದ ಪ್ರಶ್ನೆಗೆ , ಅವರು ತಮ್ಮ ಸಂಪರ್ಕದಲ್ಲಿದ್ದಾರೆ. ಅವರು ನಮ್ಮೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಳ್ಳುತ್ತಾರೆ ಎಂದರು.

ಗೋಪಾಲ ಪೂಜಾರಿ ನಾಮಪತ್ರ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಗ್ರಾಮ ದೇವತೆ ಸೇನೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ನೂರಾರು ಅಭಿಮಾನಿಗಳ ಜತೆ ಚುನಾವಣಾ ಕಚೇರಿಗೆ ನಡೆದು ಬಂದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್, ಮದನ್‌ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಪಕ್ಷದ ಪ್ರಮುಖ ರಾಜು ದೇವಾಡಿಗ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ಕುಡಿಯುವ ನೀರಿಗೆ ಆದ್ಯತೆ

ನಾಮಪತ್ರ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮತದಾರರು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ, ಪ್ರತಿ ಮನೆಗೂ ತಲಪಿರುವ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮನಗಂಡು ತನ್ನನ್ನು ಬೆಂಬಲಿಸಲಿದ್ದಾರೆ. ಆಯ್ಕೆಯಾಗಿ ಬಂದರೆ ಬೈಂದೂರು ಕ್ಷೇತ್ರವನ್ನು ಇನ್ನುಷ್ಟು ಅಭಿವೃದ್ಧಿ ಪಡಿಸಲು ಶಕ್ತಿಮೀರಿ ಶ್ರಮಿಸುತ್ತೇನೆ ಎಂದರು. ಈಗಾಗಲೇ ಶಿರೂರಿನಲ್ಲಿ ಸಮುದ್ರದ ನೀರನ್ನು ಸಿಹಿಗೊಳಿಸುವ ಯೋಜನೆ ರೂಪಿಸಿದ್ದು, ಇದು ಯಶಸ್ವಿಯಾದರೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ನಿರತರಾಗಿರುವ ಗೋಪಾಲ ಪೂಜಾರಿ ಕೃಷಿ ಜಮೀನು ಹೊಂದಿಲ್ಲ. ಬೆಂಗಳೂರಿನಲ್ಲಿ ನಿವೇಶನ, ವಸತಿ, ವಾಣಿಜ್ಯ ಕಟ್ಟಡಗಳ ಒಡೆಯರಾಗಿದ್ದು ಅವುಗಳ ಮೌಲ್ಯ ₹ 5.15 ಕೋಟಿ ಎಂದು ನಾಮಪತ್ರದ ಜತೆಗೆ ಸಲ್ಲಿಸಿರುವ ಘೋಷಣೆಯಲ್ಲಿ ತಿಳಿಸಿದ್ದಾರೆ. ಒಂದು ವಾಣಿಜ್ಯ ಕಟ್ಟಡ 6 ಜನರ ಮತ್ತು ಇನ್ನೊಂದು 3 ಜನರ ಜಂಟಿ ಒಡೆತನದ್ದಾಗಿವೆ. 2016–17ನೆ ವರ್ಷಕ್ಕೆ ₹ 21.78 ಲಕ್ಷ ಆದಾಯ ಘೋಷಿಸಿದ್ದಾರೆ. ಪತ್ನಿ ಮಮತಾ, ಪುತ್ರರಾದ ಸೂರಜ್, ಪವನ್, ಪುತ್ರಿ ಕೀರ್ತಿ ಅವರ ಅವಲಂಬಿತರು. ಪೂಜಾರಿ ₹ 7.5 ಲಕ್ಷ, ಪತ್ನಿ ಬಳಿ  ₹ 50 ಸಾವಿರ ನಗದು ಇದೆ.  ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ ₹ 7.92 ಲಕ್ಷ, ಪತ್ನಿ ಬಳಿ ₹ 1.83 ಲಕ್ಷ  ಇದೆ.  ಅವರ ಹೆಸರಿನಲ್ಲಿ ₹ 3.54 ಲಕ್ಷ ಮತ್ತು ಪತ್ನಿಯ ಹೆಸರಿನಲ್ಲಿ ₹ 3.7 ಲಕ್ಷ ಮೌಲ್ಯದ ಇಕ್ವಿಟಿ ಶೇರ್‌ಗಳಿವೆ. ಎರಡು ವಾಹನಗಳ ಮೌಲ್ಯ ₹ 9.59 ಲಕ್ಷ. ಅವರಿಗೆ ₹  4.94 ಕೋಟಿ ಸಾಲ ಇದೆ. ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿದ್ದಾರೆ. ಅವರ ವಿರುದ್ಧ ಯಾವುದೇ ಮೊಕದ್ದಮೆ, ಪ್ರಥಮ ಮಾಹಿತಿ ವರದಿ ದಾಖಲಾಗಿಲ್ಲ.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ₹ 2,39,29,509.55 , ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿರುವುದಾಗಿ  ಘೋಷಿಸಿದ್ದಾರೆ. ಕಾರ್ಪೊರೇಶನ್‌ ಬ್ಯಾಂಕಿನಲ್ಲಿ ₹ 54,366.20 , ವಿಜಯಬ್ಯಾಂಕ್ ₹ 64,125.68  ಸಿಂಡಿಕೇಟ್ ಬ್ಯಾಂಕ್ ₹ 51,576.71 , ಯೂನಿಯನ್ ಬ್ಯಾಂಕ್ನಲ್ಲಿ ₹ 56,056.56 , ಕರ್ನಾಟಕ ಕೋ ಆಪರೇಟಿವ್ ಅಪೆಕ್ಸ್ ₹ 11,742.02 , ಕರ್ಣಾಟಕ ಬ್ಯಾಂಕ್ 51,814.70 , ವಿಜಯಬ್ಯಾಂಕ್ 50,000 ಇದೆ.  25,15,563.68 ವ್ಯಕ್ತಿಗೆ ಸಾಲ ನೀಡಿದ್ದಾರೆ. 15.31ಲಕ್ಷ ಮೌಲ್ಯದ ಇನ್ನೋವ ಕಾರು, 30 ಸಾವಿರ ಮೌಲ್ಯದ ಹೀರೊ ಹೋಂಡ ಬೈಕು, 72 ಸಾವಿರ ಮೌಲ್ಯದ 24 ಗ್ರಾಂ ಚಿನ್ನ, 1.62 ಲಕ್ಷ ಮೌಲ್ಯದ ಇತರೆ ಆಸ್ತಿ ಇದ್ದು ಒಟ್ಟು₹  46,96,209.55  ಚರಾಸ್ತಿಯನ್ನು ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಒಂದು ಫ್ಲಾಟ್, ಕಾಪುನಲ್ಲಿ ಮನೆ, ಕೃಷಿ ಭೂಮಿ ಸೇರಿದಂತೆ  ₹1.92,33,300.00   ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ಪತ್ನಿ ಇಂದಿರ ಎಲ್.ಮೆಂಡನ್ ಹೆಸರಲ್ಲಿ ₹ 11,990.63  ಸಿಂಡಿಕೇಟ್ಬ್ಯಾಂಕ್ನಲ್ಲಿ, 26,354.35 ಸಿಂಡಿಕೇಟ್ಬ್ಯಾಂಕ್, 23,65,538 ರೂ ಮೌಲ್ಯದ ಫಾರ್ಮ ಡಿಸ್ಟ್ರಿಬ್ಯೂಟರ್, ಮಲ್ಪೆಯಲ್ಲಿ 15.87 ಲಕ್ಷ ಮೌಲ್ಯದ ಕೋಲ್ಡ್ ಸ್ಟೋರೇಜ್, 6 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಸೇರಿದಂತೆ ಒಟ್ಟು₹ 53,03,764.29  , ಮೌಲ್ಯದ ಚರಾಸ್ತಿ ಇದೆ.

ಪುತ್ರಿ ಶ್ರಾವಣ ಹೆಸರಲ್ಲಿ 11,990.63 ಸಿಂಡಿಕೇಟ್ ಬ್ಯಾಂಕಿನಲ್ಲಿ ಠೇವಣಿ, 4 ಲಕ್ಷ ಮತ್ತು 1 ಲಕ್ಷ ಮೌಲ್ಯದ ಎಲ್ಐಸಿ ವಿಮೇ, 1.20 ಸಾವಿರ ಮೌಲ್ಯದ 40 ಗ್ರಾಂ ಚಿನ್ನ ಸೇರಿದಂತೆ ಪುತ್ರಿಯ ಹೆಸರಲ್ಲಿ 1.31 ಲಕ್ಷ ಚರಾಸ್ತಿ ಇದೆ. ಪುತ್ರ ವರುಣ್ ಹೆಸರಲ್ಲಿ 72 ಸಾವಿರ ಮೌಲ್ಯದ ಚಿನ್ನವಿದೆ. 2013 ವಿಧಾನಸಭಾ ಚುನಾವಣೆಯಲ್ಲಿ ಲಾಲಾಜಿ ಮೆಂಡನ್ 57,38,313  ಮೌಲ್ಯದ ಆಸ್ತಿ ಘೋಷಣೆ ಮತ್ತು ₹ 48,11,003 ಸಾಲ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದರು.

ಕಾಪು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ  ಸಲ್ಲಿಸಿರುವ ಅಫಿದಾವಿತ್‌ನಲ್ಲಿ ₹ 27,14,021 ಹಾಗೂ ಪತ್ನಿ ದಕ್ಷಾ ವಿ. ಸೊರಕೆ ₹ 29,91,945 ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

2016-17ನೇ ಸಾಲಿನಲ್ಲಿ ₹ 12, 04,488  ಹಾಗೂ ಪತ್ನಿ ದಕ್ಷಾ ವಿ. ಸೊರಕೆ ₹ 6 ಲಕ್ಷ  ಆದಾಯ ಹೊಂದಿದ್ದಾರೆ.  ಪತ್ನಿ ₹ 1.30 ಲಕ್ಷ ಹೊಂದಿದ್ದಾರೆ. ಎಸ್‌ಬಿಐ

ವಿಧಾನಸಭಾ ಶಾಖೆಯಲ್ಲಿ ₹ 1,00,903  ನವದೆಹಲಿ ಶಾಖೆಯಲ್ಲಿ ₹81 , ಕಾರ್ಪೊರೇಶನ್‌ ಬ್ಯಾಂಕ್ ಉಳಿಯಾರುಗೋಳಿ ಶಾಖೆಯಲ್ಲಿ ₹ 13,037  ಠೇವಣಿ ಇಟ್ಟಿದ್ದಾರೆ. ಪತ್ನಿ ಕಾರ್ಪೊರೇಶನ್‌ ಬ್ಯಾಂಕ್ ಶಿರ್ತಾಡಿ ಶಾಖೆಯಲ್ಲಿ ₹ 11,898 ,  ಅಂಚೆ ಕಚೇರಿಯಲ್ಲಿ 52 ಸಾವಿರ ಠೇವಣಿ ಹೊಂದಿದ್ದು, ₹ 1 ಲಕ್ಷ  ಎಲ್ಐಸಿ ಜೀವವಿಮೆ ಪಡೆದಿದ್ದಾರೆ.

ಸೊರಕೆಯವರು 26 ಲಕ್ಷ  ಮೌಲ್ಯದ ಇನ್ನೋವಾ ಕಾರು ಹೊಂದಿದ್ದು, ಇದಕ್ಕಾಗಿ ಬ್ಯಾಂಕ್‌ನಲ್ಲಿ 20,06,326 ರೂ. ಸಾಲ ಪಡೆದಿದ್ದಾರೆ.ಯಾವುದೇ ಆಭರಣ ಹೊಂದಿಲ್ಲ. ಪತ್ನಿ 25.20 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಸೊರಕೆಯವರಿಗೆ ಪುತ್ತೂರಿನಲ್ಲಿ 89,49,950 ರೂ. ಹಾಗೂ ಪತ್ನಿ 1.30 ಕೋಟಿ ಮೌಲ್ಯದ ಪಿತ್ರಾರ್ಜಿತ  ಆಸ್ತಿ ಇದೆ.

ಪತ್ನಿ ಹಾಗೂ ಮಾವನ ಜಂಟಿ ಹೆಸರಿನಲ್ಲಿ ಉಡುಪಿಯಲ್ಲಿ 1 ಫ್ಲಾಟ್ ಇದ್ದು, ಅಜ್ಜರಕಾಡಿನಲ್ಲಿ ಅಂದಾಜು ₹ 67.50 ಲಕ್ಷ ಮಾರುಕಟ್ಟೆ ಮೌಲ್ಯದ 37 ಸೆಂಟ್ಸ್ ಜಾಗವನ್ನು 2005ರಲ್ಲಿ ಪತ್ನಿ ದಕ್ಷಾ ಸೊರಕೆ ಖರೀದಿಸಿದ್ದಾರೆ. ಜತೆಗೆ ಅವರು ವಿಜಯಾಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ 1 ಕೋಟಿ ರೂ. ಸಾಲ ಪಡೆದಿದ್ದು, 95,45,289 ರೂ. ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT