ಗುರುವಾರ , ಜೂನ್ 24, 2021
23 °C
ರೆಡ್‌ಕ್ರಾಸ್‌ನಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಆರಂಭಕ್ಕೆ ನಿರ್ಧಾರ

ರೆಡ್‌ ಕ್ರಾಸ್‌ನಿಂದ ಆಮ್ಲಜನಕದ ಅಳಿಲು ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯು ‘ಆಕ್ಸಿಜನ್‌ಗಾಗಿ ಅಳಿಲು ಸೇವೆ’ ಆರಂಭಿಸಲು ಉದ್ದೇಶಿಸಿದೆ.

‘ಕೊರೊನಾ ಬಂದಾಗ ಆಮ್ಲಜನಕದ ಕೊರತೆಯಿಂದಾಗಿ ದೇಶದ ವಿವಿಧೆಡೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ದಾವಣಗೆರೆಯೂ ಇದಕ್ಕೆ ಹೊರತಲ್ಲ. ಇದರಿಂದಾಗಿ ರೆಡ್‌ ಕ್ರಾಸ್ ಸೊಸೈಟಿ ಕಟ್ಟಡದಲ್ಲಿ ನೂತನವಾಗಿ ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಿ ಆಮ್ಲಜನಕ ಪೂರೈಸಲು ಉದ್ದೇಶಿಸಲಾಗಿದೆ’ ಎಂದು ರೆಡ್‌ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ನಿಧಿ ಸಂಗ್ರಹಣಾ ಅಭಿಯಾನ ಆರಂಭಿಸಿದ್ದು, ಈಗಾಗಲೇ ₹ 4 ಲಕ್ಷ ಸಂಗ್ರಹವಾಗಿದ್ದು, ₹ 33 ಲಕ್ಷ ಸಂಗ್ರಹವಾದರೆ 17, ₹ 50 ಲಕ್ಷ ಸಂಗ್ರಹವಾದರೆ 34 ಸಿಲಿಂಡರ್‌ಗಳ ಸಾಮರ್ಥ್ಯದ ಉತ್ಪದನಾ ಘಟಕವನ್ನು ನಿರ್ಮಿಸಲಾಗುವುದು. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಲವರಿಗೆ ಈ ವಿಷಯವನ್ನು ಹಲವರಿಗೆ ತಲುಪಿಸಿದ್ದೇವೆ’ ಎಂದು ಹೇಳಿದರು.

‘ದಾವಣಗೆರೆ ಕ್ಯಾನ್ಸರ್ ಫೌಂಡೇಷನ್, ಸ್ವಯಂಪ್ರೇರಿತ ರಕ್ತದಾನಿಗಳ ಒಕ್ಕೂಟ, ‘ಲೈಫ್‌ಲೈನ್’ ಹಾಗೂ ‘ಗೆಳೆಯರು’ ಪ್ರತಿಷ್ಠಾನಗಳು ಈ ಕಾರ್ಯಕ್ಕೆ ಕೈಜೋಡಿವೆ’ ಎಂದು ತಿಳಿಸಿದರು.

ಕಲಾವಿದ ಆರ್‌.ಟಿ. ಅರುಣ್‌ಕುಮಾರ್ ಮಾತನಾಡಿ, ‘ಈ ಸಮಯದಲ್ಲಿ ರೋಗಿಗಳಿಗೆ ಬೇಡ್ ಸಿಕ್ಕರೂ ಆಮ್ಲಜನಕ ಕೊರತೆ ಇದೆ. ಇದನ್ನು ಮನಗಂಡು ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸುವ ಆಲೋಚನೆ ಮಾಡಿದ್ದೇವೆ. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿದೇಶಗಳಲ್ಲಿ ನೆಲೆಸಿರುವ ವೈದ್ಯರು ಹಾಗೂ ಎಂಜಿನಿಯರ್‌ಗಳಿಗೆ ‘ನೀವು ಉಸಿರಾಡಿದ ನೆಲಕ್ಕೆ ಪ್ರಾಣವಾಯು ಬೇಕಾಗಿದೆ’ ಎಂದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ವಿಷಯ ಹಂಚಿಕೊಂಡೆ. ಎಲ್ಲರೂ ಇದಕ್ಕೆ ಸಹಕರಿಸಿದ್ದಾರೆ’ ಎಂದರು.

ದಾನಿಗಳು ಮೊಬೈಲ್ ಸಂಖ್ಯೆ: 9964582203 ಸಂಪರ್ಕಿಸಬಹುದು ಎಂದು ಹೇಳಿದರು.

ಸಿ.ಎ.ಉಮೇಶ್‌ ಶೆಟ್ಟಿ, ಅನಿಲ್ ಬಾರಂಗಳ್, ವರದಿಗಾರರ ಒಕ್ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.