ಗುರುವಾರ , ಜುಲೈ 29, 2021
23 °C

ದಾವಣಗೆರೆ: ಅಧಿಕಾರಿಗಳಿಂದ ಬಾಲ್ಯ ವಿವಾಹಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಿಶ್ಚಯವಾಗಿದ್ದ ಬಾಲ್ಯವಿವಾಹವನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ ತಡೆದಿದೆ.

ಹರಿಹರದ ಬಾಲಕಿಯನ್ನು ಹದಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಡಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದಿತ್ತು. ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ.ಕೊಟ್ರೇಶ್, ಸಹಾಯವಾಣಿ ಕಾರ್ಯಕರ್ತರಾದ ಡಿ.ಮಂಜುನಾಥ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶೈಲಾ ಎಸ್.ಮೈದೂರು ತಂಡವು ಬಾಲಕಿಯ ಮನೆಗೆ ಭೇಟಿ ನೀಡಿತು.

ದಾಖಲೆ ಪರಿಶೀಲಿಸಿದಾಗ ಬಾಲಕಿಗೆ 16 ವರ್ಷ ನಾಲ್ಕು ತಿಂಗಳು ಎಂಬುದು ಗೊತ್ತಾಯಿತು. ಬಾಲಕಿಯ ತಂದೆ ಮೃತಪಟ್ಟಿದ್ದು, ತಾಯಿಯು ಸಂಬಂಧಿ ಯುವಕನಿಗೇ ಕೊಟ್ಟು ಜವಾಬ್ದಾರಿ ಮುಗಿಸಲು ನಿರ್ಧರಿಸಿರುವುದು ಗೊತ್ತಾಯಿತು. ಬಾಲ್ಯ ವಿವಾಹ ಮಾಡಿದರೆ ₹ 1 ಲಕ್ಷ ದಂಡ, 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆ ಇರುವುದನ್ನು ತಿಳಿಸಿ, ಕಾನೂನು ಅರಿವು ಮೂಡಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಅವರ ಸಮ್ಮುಖದಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು