ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಪತ್ತೆಗೆ ಖಾಸಗಿ ವೈದ್ಯರು ಸಹಕರಿಸಿ’

Last Updated 21 ಮೇ 2021, 4:12 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಪತ್ತೆ ಮಾಡುವ ನಿಟ್ಟಿನಲ್ಲಿ ಖಾಸಗಿ ವೈದ್ಯರು ಸಹಕರಿಸಿ ಎಂದು ಟಿಎಚ್ಒ ಡಾ. ಚಂದ್ರಮೋಹನ್ ಕೋರಿದರು.

ಪಟ್ಟಣದ ಪುರಸಭೆಯಲ್ಲಿ ಬುಧವಾರ ಖಾಸಗಿ ವೈದ್ಯರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆ ರೋಗಿಗಳು ಗುಂಪುಗೂಡದಂತೆ ನೋಡಿಕೊಳ್ಳಿ. ಜ್ವರ ,ಶೀತ, ಕೆಮ್ಮು, ನೆಗಡಿ ಕಂಡು ಬಂದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊರೊನಾ ಪತ್ತೆ ಪರೀಕ್ಷೆಗೆ ಕಳುಹಿಸಿಕೊಡಬೇಕು.ಸಾಕಷ್ಟು ಪ್ರಕರಣಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿ ಕೈ ಮೀರಿದಾಗ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.

ಡಾ. ಹನುಮಂತಪ್ಪ, ಡಾ. ಶ್ರೀನಿವಾಸ್, ‘ರೋಗಿಗಳ ಸಂಖ್ಯೆ ಹೆಚ್ಚು ಇದೆ. ನಾವು ಕೂಡ ಸಾಕಷ್ಟು ಎಚ್ಚರಿಕೆ ನೀಡುತ್ತೇವೆ. ಆದರೆ ಜನರು ಸಹಕರಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಡಾ. ಬಿ. ಚಂದ್ರಶೇಖರ್, ‘ಗ್ರಾಮೀಣ ಭಾಗದ ಕೊಕ್ಕನೂರು, ಕುಂಬಳೂರು, ಹರಳಹಳ್ಳಿ ಕಡೆ ಜನರಲ್ಲಿ ಜ್ವರ, ಶೀತ ಹೆಚ್ಚಾಗಿದೆ.ಆಸ್ಪತ್ರೆಗೆ ಚಿಕಿತ್ಸೆ ಬರುವ ರೋಗಿಗಳನ್ನು ನಿಯಂತ್ರಿ
ಸಲು ಪೊಲೀಸರ ಮೊರೆ ಹೋಗಿ
ದ್ದೇವೆ.ಬಹುತೇಕ ಭಾಗದಲ್ಲಿ ರೋಗ ಪೀಡಿತರು ಸ್ವಯಂ ವೈದ್ಯರಾಗಿದ್ದಾರೆ. ಔಷಧದ ಅಂಗಡಿಗಳಿಂದ ಮಾತ್ರೆ ಪಡೆದು, ಗಂಭೀರ ಸಮಸ್ಯೆಯಾದಾಗ ಆಸ್ಪತ್ರೆಗೆ ಬರುತ್ತಾರೆ’ ಎಂದರು.

ಪುರಸಭೆ ಮುಖ್ಯಾಧಿಕಾರಿ ದಿನಕರ್‌, ‘ವೈದ್ಯರು ಅಂತರ ಪಾಲಿಸಬೇಕು. ಜನ ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು.ಆಸ್ಪತ್ರೆ ಸುತ್ತಲಿನ ಜನವಸತಿ ಪ್ರದೇಶದ ನಾಗರಿಕರಿಗೆ ತೊಂದರೆಯಾಗಿ ದೂರು ನೀಡಿದರೆ ಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಡಾ. ಹರೀಶ್ ತೋಳಾರ್, ಡಾ. ಅಪೂರ್ವ, ಡಾ. ಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪತ್ತೆ ಕಿಟ್ ವ್ಯವಸ್ಥೆ ಮಾಡುವಂತೆ ಕೋರಿದರು.

ಉಪತಹಶೀಲ್ದಾರ್ ಆರ್. ರವಿ, ಹಿರಿಯ ಆರೋಗ್ಯ ನಿರೀಕ್ಷಕ ಉಮ್ಮಣ್ಣ, ಪರಿಸರ ಎಂಜಿನಿಯರ್ ಉಮೇಶ್, ಆರೋಗ್ಯ ಕೇಂದ್ರದ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT