ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ತಿಮ್ಮಪ್ಪಸ್ವಾಮಿ ದೇವಸ್ಥಾನದ ಕಳಸಾರೋಹಣಕ್ಕೆ ಭರದ ಸಿದ್ಧತೆ

Last Updated 8 ಫೆಬ್ರುವರಿ 2018, 10:05 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ತಾಲ್ಲೂಕಿನ ಪುಣ್ಯ ಕ್ಷೇತ್ರವಾದ ಕುಮ್ಮಿನಘಟ್ಟದ ಗುಡ್ಡದ ತಿಮ್ಮಪ್ಪ ಸ್ವಾಮಿಯ ದೇವಸ್ಥಾನದ ವಿಮಾನ ಗೋಪುರದ ಪುನರ್‌ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಡೆಸಲು ಭರದ ಸಿದ್ಧತೆಯನ್ನು ನಡೆಸಲಾಗಿದೆ.

ಫೆ. 9ರಂದು ದೇವತಾ ಕಾರ್ಯಗಳಿಗೆ ವಿವಿಧ ಗ್ರಾಮಗಳಿಂದ ದೇವರ ಮೂರ್ತಿಗಳು ಬರಲಿವೆ. ರಾತ್ರಿ ದೇವಸ್ಥಾನದಲ್ಲಿ ಕಳಸಾರೋಹಣ ನಿಮಿತ್ತ ದಾವಣಗೆರೆಯ ವೇದ ಬ್ರಹ್ಮ ಪವನ್‌ ಭಟ್‌ ಅವರಿಂದ ವಾಸ್ತು ಹೋಮ, ರಾಮೋಘ್ನ ಹೋಮ ಹಾಗೂ ದಿಗ್ಬಲಿ ಹವನಗಳನ್ನು ನಡೆಸಲಾಗುವುದು. ಫೆ. 10ರಂದು ಮುಂಜಾನೆ ಗಣ ಹೋಮ, ಮೂಲಮಂತ್ರ ಹೋಮವನ್ನು ನಡೆಸಿ, ಕಳಸಾರೋಹಣವನ್ನು ನಡೆಸಲಾಗುವುದು.

ಬೆಳಿಗ್ಗೆ 8.30ಕ್ಕೆ ಹೊಸದುರ್ಗದ ಕುಂಚಿಟಿಗ ಮಹಾ ಸಂಸ್ಥಾನದ ಡಾ. ಶಾಂತವೀರ ಮಹಾಸ್ವಾಮಿ ಅವರಿಂದ ಕಳಸಾರೋಹಣ ನಡೆಸಲಾಗುವುದು. ನಂತರ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಗುಡ್ಡದ ತಿಮ್ಮಪ್ಪ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ನಡೆಯಲಿದೆ.

ಭಕ್ತರು ತನು, ಮನ, ಧನಗಳೊಂದಿಗೆ ಸ್ವಾಮಿಯ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯ ಸಂಚಾಲಕ, ಸದಸ್ಯರು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT