ಫಲವನಹಳ್ಳಿ (ನ್ಯಾಮತಿ): ಗ್ರಾಮದ ಹೊರವಲಯದ ರೈತರೊಬ್ಬರ ಶುಂಠಿ ಹೊಲದಲ್ಲಿ ಭಾರಿ ಗ್ರಾತ್ರದ ಹೆಬ್ಬಾವು ಮಂಗಳವಾರ ಕಂಡು ಬಂದಿದ್ದು, ಅರಣ್ಯ ಇಲಾಖೆ ಸಹಕಾರದಲ್ಲಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ಬರಲಾಯಿತು.

‘ರೈತರು ಇಲಾಖೆ ಗಮನಕ್ಕೆ ತಂದ ತಕ್ಷಣ ಶಿವಮೊಗ್ಗ ಸ್ನೇಕ್ ಕಿರಣ್ ಅವರನ್ನು ಕರೆಯಿಸಿ ಹೆಬ್ಬಾವನ್ನು ರಕ್ಷಿಸಿ, ದೂರದ ಅರಣ್ಯಕ್ಕೆ ಬಿಡಲಾಯಿತು. ಹೆಬ್ಬಾವು 8ರಿಂದ 10 ಅಡಿ ಉದ್ದ, 15ರಿಂದ 18 ಕೆ.ಜಿ. ತೂಕವಿತ್ತು’ ಎಂದು ಉಪವಲಯ ಅರಣ್ಯಾಧಿಕಾರಿ ಎಚ್. ಕೃಷ್ಣಮೂರ್ತಿ ತಿಳಿಸಿದರು.

ಅರಣ್ಯ ರಕ್ಷಕ ನಿಂಗರಾಜ ಹರವಿ, ಅರಣ್ಯ ವೀಕ್ಷಕ ಬಸವರಾಜಪ್ಪ, ಚಂದ್ರಪ್ಪ ಅವರೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.