ದಾವಣಗೆರೆ: ನಗರದಲ್ಲಿ ಭಾನುವಾರ ರಾತ್ರಿ ಸೇರಿದಂತೆ ಸೋಮವಾರ ಬೆಳಿಗ್ಗೆಯೂ ಮಳೆಯಾಯಿತು. ಹಲವು ದಿನಗಳಿಂದ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪನ್ನೆರೆಯಿತು.

ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ವಾಡಿಕೆ ಮಳೆ 1.8 ಮಿ.ಮೀಗೆ 3.16 ಸೆಂಟಿ ಮೀಟರ್ ಮಳೆಯಾಗಿದ್ದು, ಶೇ 1,656ರಷ್ಟು ಹೆಚ್ಚುವರಿ ಮಳೆಯಾಗಿದೆ.

ವಾರ್ಷಿಕ ಮಳೆ:

ಹೊನ್ನಾಳಿ ಉಪವಿಭಾಗದಲ್ಲಿ ಹೊನ್ನಾಳಿ ತಾಲ್ಲೂಕಿನ 9.44 ಸೆಂಟಿ ಮೀಟರ್ ವಾಡಿಕೆ ಮಳೆಗೆ 16.24 ಸೆಂ.ಮೀ ಮಳೆಯಾಗಿದ್ದು, ನ್ಯಾಮತಿಯಲ್ಲಿ 9.44 ಸೆಂ.ಮೀಗೆ 19.94 ಸೆಂಟಿ ಮೀಟರ್, ಚನ್ನಗಿರಿಯಲ್ಲಿ 28.22 ಸೆಂಟಿ ಮೀಟರ್ ಮಳೆಯಾಗಿದ್ದು, ಸರಾಸರಿ 13.65 ಸೆಂಟಿ ಮೀಟರ್ ಮಳೆ ಸುರಿದಿದೆ. ದಾವಣಗೆರೆ ಉಪವಿಭಾಗದ ದಾವಣಗೆರೆ ತಾಲ್ಲೂಕಿನಲ್ಲಿ 24.7 ಸೆಂ.ಮೀ, ಹರಿಹರದಲ್ಲಿ 8.34 ಸೆಂ.ಮೀ, ಜಗಳೂರಿನಲ್ಲಿ 4.33 ಸೆಂ.ಮೀ ಮಳೆ ಬಿದ್ದಿದೆ.

ಅಂಕಿ ಅಂಶ
ತಾಲ್ಲೂಕು;ವಾಡಿಕೆ ಮಳೆ (ಮಿ.ಮೀಗಳಲ್ಲಿ);ಬಿದ್ದ ಮಳೆ (ಸೆಂ.ಮೀ.ಗಳಲ್ಲಿ)
ಚನ್ನಗಿರಿ;2.6;4.19
ದಾವಣಗೆರೆ;2.1;3.52
ಹರಿಹರ;2.1;1.77
ಹೊನ್ನಾಳಿ:3.3;3.48
ಜಗಳೂರು;0.7;1.13
ನ್ಯಾಮತಿ;2.2;5.40

ಬೀಜೋಪಚಾರ ಕಡ್ಡಾಯ:

ಜಿಲ್ಲೆಯಲ್ಲಿ 600 ಹೆಕ್ಟೇರ್ ಹಿಂಗಾರು ಬಿತ್ತನೆಯಾಗಿದ್ದು ಮಳೆಯಿಂದಾಗಿ ಹಿಂಗಾರು ಹಾಗೂ ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿದೆ. ರೈತರು ಹಿಂಗಾರು ಬಿತ್ತನೆಗೆ ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು. ಜೋಳ ಬಿತ್ತನೆ ಮಾಡುವವರು ಕ್ಲೊರೊಫೈರಿಪಾಸ್ ಹಾಗೂ ಕಡಲೆ ಬಿತ್ತನೆ ಮಾಡುವವರು ರೈಜೋಬಿಯಂ ಜೀವಾಣು ಹಾಗೂ ಕ್ರೈಕೊಡರ್ಮ ಜೈವಿಕ ಗೊಬ್ಬರ ಮಿಶ್ರಣ ಮಾಡಿ ಬಿತ್ತನೆ ಮಾಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.