ಶನಿವಾರ, ಜೂನ್ 25, 2022
28 °C

ಸೋಂಕಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ಕೊರೊನಾದಿಂದ ಮೃತಪಟ್ಟ ಯುವಕರೊಬ್ಬರ ಮೃತ ದೇಹವನ್ನು ಗ್ರಾಮಕ್ಕೆ ತರಲು ಗ್ರಾಮಸ್ಥರು ಒಪ್ಪದ ಕಾರಣ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರೇ ಆಂಬುಲೆನ್ಸ್‌ ಚಾಲನೆ ಮಾಡಿಕೊಂಡು ಹೋಗಿ ಮೃತದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವಕ ಲಾಕ್‍ಡೌನ್‌ನಿಂದಾಗಿ ಊರಿಗೆ ಬಂದಿದ್ದರು. ಕೊರೊನಾ ಸೋಂಕು ತಗುಲಿದ ಕಾರಣ ಹೊನ್ನಾಳಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮುಂಜಾನೆ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕರು ಯುವಕನಿಗೆ ಧೈರ್ಯ ಹೇಳಿ ಬಂದಿದ್ದರು. ಆದರೆ ‌ಕೆಲವೇ ಗಂಟೆಗಳಲ್ಲಿ ಯುವಕ ಮೃತಪಟ್ಟಿದ್ದ.

ಮೃತ ದೇಹ ಗ್ರಾಮಕ್ಕೆ ತರದಂತೆ ಮನವಿ: ಜಗಳೂರು ತಾಲ್ಲೂಕಿನ ಯುವಕನ ಪೋಷಕರು ಹೊನ್ನಾಳಿಯಲ್ಲಿ ನೆಲೆಸಿದ್ದರು. ಮೃತ ದೇಹವನ್ನು ಜಗಳೂರಿಗೆ ತೆಗೆದುಕೊಂಡು ಹೋಗಲು ಪೋಷಕರು ಮುಂದಾದಾಗ ಗ್ರಾಮಸ್ಥರು ಗ್ರಾಮಕ್ಕೆ ತರದಂತೆ ಮನವಿ
ಮಾಡಿದರು. ವಿಷಯ ತಿಳಿಯುತ್ತಿದ್ದಂತೆ ಶಾಸಕರೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ಮೃತದೇಹ ತಂದು ಹೊನ್ನಾಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು