‘40 ಮೀಟರ್ ಉದ್ದದ ನಾಲೆ ಒಡೆದ ಸ್ಥಳದಲ್ಲಿ ಕಬ್ಬಿಣ, ಸಿಮೆಂಟ್ ಹಾಕಿ, ತಾತ್ಕಾಲಿಕಾಗಿ ದುರಸ್ತಿ ಮಾಡಲಾಗಿದೆ. ಈಗ ನಾಲೆಯಲ್ಲಿ 1,600 ಕ್ಯುಸೆಕ್ ನೀರು ಹರಿಯುತ್ತಿದೆ. ಮುಂದಿನ ಬೇಸಿಗೆಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಎಂಜಿನಿಯರ್ ಕೆ.ಎಂ.ಮಂಜುನಾಥ ತಿಳಿಸಿದರು.