ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಪರೇಡ್: ಮಕ್ಕಳಿಗೆ ನೀರು, ಲಘು ಉಪಾಹಾರ ನೀಡಲು ಆಗ್ರಹ

Published 25 ಜನವರಿ 2024, 15:40 IST
Last Updated 25 ಜನವರಿ 2024, 15:40 IST
ಅಕ್ಷರ ಗಾತ್ರ

ಹರಿಹರ: ನಗರದ ಗಾಂಧಿ ಮೈದಾನದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಲಘು ಉಪಹಾರ ವ್ಯವಸ್ಥೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಬಿ.ಸೋಮಶೇಖರ ಗೌಡ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ 6.30ಕ್ಕೆ ಕವಾಯತು ಪ್ರದರ್ಶನ ನೀಡಲು ಆಗಮಿಸುತ್ತಾರೆ. ಮುಂಜಾನೆಯೆ ಮನೆ ಬಿಟ್ಟು ಬರುವ ವಿದ್ಯಾರ್ಥಿಗಳು 11 ಗಂಟೆವರೆಗೂ, ಕನಿಷ್ಠ ನಾಲ್ಕು ತಾಸು ಬಿಸಿಲು ಮತ್ತು ಧೂಳಿನಲ್ಲಿ ನಿಂತಿರುತ್ತಾರೆ. ಒಣ ಹವೆ ಇರುವುದರಿಂದ ಬಿರು ಬಿಸಿಲಿಗೆ ಬಾಯಾರಿಕೆ ಆಗುತ್ತದೆ. ಆದಕಾರಣ ಶುದ್ಧವಾದ ಕುಡಿಯುವ ನೀರು, ಲಘು ತಿಂಡಿಯ ವ್ಯವಸ್ಥೆ ಮಾಡಬೇಕು ಎಂದು ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರಿಗೆ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT