ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಗಟ್ಟೆ: ದೇವರ ಪೂಜಾ ಕಾರ್ಯದ ಸಂಭ್ರಮ

Published 22 ನವೆಂಬರ್ 2023, 13:30 IST
Last Updated 22 ನವೆಂಬರ್ 2023, 13:30 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸಮೀಪದ ಕುಳಗಟ್ಟೆ ಗ್ರಾಮದ ವಾಲ್ಮೀಕಿ ಸಮುದಾಯದವರು ಪ್ರತಿವರ್ಷ ದೀಪಾವಳಿ ನಂತರದ ಮೊದಲ ಮಂಗಳವಾರದಂದು ಗ್ರಾಮದ ಹೊರವಲಯದಲ್ಲಿರುವ ಮಲ್ಲೇಶ್ವರ ದೇವರು ಹಾಗೂ ಪರಿವಾರದ ದೇವರುಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು. 

ಸೋಮವಾರದಿಂದಲೇ ಹಬ್ಬದ ವಾತಾವರಣ ಇತ್ತು. ಮಂಗಳವಾರ ಬ್ರಾಹ್ಮಿ ಮೂಹೂರ್ತದಲ್ಲಿ ದೇವರ ಮೂರ್ತಿಗಳಿಗೆ ಅಲಂಕಾರ, ಅಭಿಷೇಕ ಜರುಗುತ್ತವೆ. ನಂತರ ದೊಡ್ಡ ಬಾಳೆ ಎಲೆಗಳನ್ನು ದೇವರ ಮುಂದೆ ಹರಡಿ ಬಾಳೆಹಣ್ಣಿನ ಎಡೆಯನ್ನು ಸಮರ್ಪಿಸುವುದು ವಿಶೇಷ. ಈ ವರ್ಷ ತಾವು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಕಾರ್ಯ ಫಲಿಸಿದವರು ಹರಕೆ ತೀರಿಸುವ ರೂಢಿ ಇದೆ. ಈ ಆಚರಣೆ ಮೂಲಕ ಸಮಾಜದ ಏಕತೆಯ ಸಂದೇಶ ಸಾರಲಾಗುತ್ತದೆ.

‘ನಾವು ಪ್ರತಿವರ್ಷ ಈ ಆಚರಣೆಯನ್ನು ತಪ್ಪದೆ ಪಾಲಿಸುತ್ತೇವೆ. ಗ್ರಾಮದಿಂದ ಹೊರಹೋಗಿರುವ ಎಲ್ಲರೂ, ಹೆಣ್ಣು ಮಕ್ಕಳು ಈ ಹಬ್ಬದಲ್ಲಿ ಜೊತೆಗೂಡುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥ ಮಂಜುನಾಥ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT