ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ: ಹಟ್ಟಿ ಲಕ್ಕವ್ವನ ಪೂಜೆ

Last Updated 28 ಅಕ್ಟೋಬರ್ 2022, 7:38 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಹೋಬಳಿಯ ಕುಳಗಟ್ಟೆ, ಕ್ಯಾಸಿನಕೆರೆ, ಹುಣಸಘಟ್ಟ, ಹಿರೇಬಾಸೂರು, ಹೊಟ್ಯಾಪುರ, ಬೆನಕನಹಳ್ಳಿ, ಹನುಮನಹಳ್ಳಿ, ಐನೂರು, ಬುಳ್ಳಾಪುರ, ಲಿಂಗಾಪುರ, ಕಮ್ಮಾರಗಟ್ಟೆ, ಚಿಕ್ಕಬಾಸೂರು, ಬಾಗೇವಾಡಿ, ಹನಗವಾಡಿ, ಹಿರೇಬಾಸೂರು, ಚೀಲಾಪುರ, ಭೈರನಹಳ್ಳಿ ಗ್ರಾಮಗಳಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು.

ಕೃಷಿ ಉಪಕರಣಗಳನ್ನು ಶುಭ್ರಗೊಳಿಸಿ, ಜೋಡಿಸಿ, ಸಿಂಗರಿಸಿದರು. ವಿವಿಧ ಹೂವುಗಳನ್ನು ಸಂಗ್ರಹಿಸಿ ಬುಧವಾರ ಹಟ್ಟಿ ಲಕ್ಕವ್ವನನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಕೆಲವರು ಹಿರಿಯರ ಪೂಜೆಯನ್ನು ಮಾಡಿ ಎಡೆ ಸಮರ್ಪಿಸಿದರು. ಎತ್ತುಗಳನ್ನು, ದನಕರುಗಳ ಮೈ ತೊಳೆದು ಕೊಂಬುಗಳಿಗೆ ಬಣ್ಣ ಹಚ್ಚಿ ವರ್ಷ ಪೂರ್ತಿ ರೈತರೊಂದಿಗೆ ದುಡಿದ ಅವುಗಳನ್ನು ಸಿಂಗರಿಸಿಸಂತೋಷ ಪಟ್ಟರು.

ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿದರು. ಮಳೆ ಬಿಡುವು ನೀಡಿದ್ದರಿಂದ ಹಬ್ಬಕ್ಕೆ ತೊಂದರೆಯಾಗಲಿಲ್ಲ.

ಗುರುವಾರ ಬೆಳಿಗ್ಗೆ ತೋಟದ ಪೂಜೆ ನೆರೆವೇರಿಸಿ ವಿವಿಧ ಖಾದ್ಯಗಳನ್ನು ಚರಗ ಹಾಕುವ ಮೂಲಕ ಭೂಮಿ ತಾಯಿಗೂ ನೈವೇದ್ಯವನ್ನು ಸಮರ್ಪಿಸಿ, ಮಳೆ, ಬೆಳೆ ಆಗಲಿ. ಬೆಳೆ ಕೈ ಸಿಗಲಿ ಎಂದು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT