ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ- ಎಸ್‌ಡಿಪಿಐ ಕಚೇರಿಗೆ ಬೀಗ ಮುದ್ರೆ

ಎಸ್‌ಡಿಪಿಐ ಕಾರ್ಯಕರ್ತರ ಮನೆಯಲ್ಲೂ ಅಧಿಕಾರಿಗಳ ಶೋಧ
Last Updated 1 ಅಕ್ಟೋಬರ್ 2022, 4:39 IST
ಅಕ್ಷರ ಗಾತ್ರ

ದಾವಣಗೆರೆ: ನಿಷೇಧಿತ ಪ್ಯಾಪುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್‌ಐ)ನಗರದಲ್ಲಿ ಹೊಂದಿತ್ತು ಎನ್ನಲಾದಎಸ್‌ಡಿಪಿಐ ಕಚೇರಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಇಲ್ಲಿನ ಬಾಷಾನಗರ ಮುಖ್ಯರಸ್ತೆಯ ಮಿಲ್ಲತ್ ಶಾಲೆ ಬಳಿಯ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ)ದ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬೀಗಮುದ್ರೆ ಹಾಕಿದರು.

ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್. ಬಸವರಾಜ್‌ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್‌ ಅಧಿಕಾರಿಗಳುಕಚೇರಿಯಲ್ಲಿ ಶೋಧ ನಡೆಸಿದರು.

ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬೆಂಗಳೂರಿನ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಎಸ್‌ಡಿಪಿಐ ಕಚೇರಿ ಈ ಹಿಂದೆ ಪಿಎಫ್‌ಐ ಕಚೇರಿಯಾಗಿತ್ತು. ಇಲ್ಲಿ ಪಿಎಫ್ಐ ಸಂಬಂಧಿತ ಕಾರ್ಯಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.ಎಸ್‌ಡಿಪಿಐ ಕಾರ್ಯಕರ್ತ ಮೆಹಬೂಬ್ ಸುಬಾನಿ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದರು. ಸುಬಾನಿ ಮನೆಯಲ್ಲಿಪಿಎಫ್ಐಗೆ ಸಂಬಂಧಪಟ್ಟ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಹರಿಹರ ವರದಿ:

ಪಟ್ಟಣದ ಎಸ್‌ಡಿಪಿಐ ಮುಖಂಡರಾದಕಾಳಿದಾಸ ನಗರದ ಫಯಾಜ್ ಅಹ್ಮದ್, ಕೇಶವ ನಗರದ ಸೈಯದ್ ಅಶ್ಫಾಕ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಕೆಲ ದಾಖಲೆಗಳನ್ನು ವಶಪಡಿಸಿಕೊಂಡರು.ಸೈಯದ್ ಅಶ್ಫಾಕ್ ಮನೆಗೆ ಬೀಗ ಹಾಕಲಾಗಿತ್ತು. ಅದನ್ನು ಒಡೆದು ಮನೆಯೊಳಗೆ ಹೋದ ಅಧಿಕಾರಿಗಳು ಶೋಧ ನಡೆಸಿದರು.

ಇಲ್ಲಿನ ಪಿ.ಬಿ. ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಇದ್ದ ಎಸ್‌ಡಿಪಿಐ ಹಳೇ ಕಚೇರಿ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಹಳೆ ಕಚೇರಿಯಾದ್ದರಿಂದ ಬೀಗ ಹಾಕಲಾಗಿತ್ತು. ತಹಶೀಲ್ದಾರ್‌ ಡಾ.ಎಂ.ಬಿ. ಅಶ್ವತ್‌ ನೇತೃತ್ವದಲ್ಲಿ ಅದನ್ನು ಒಡೆದ ಪೊಲೀಸ್‌ ಅಧಿಕಾರಿಗಳು ಶೋಧ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಸಿಪಿಐ ಸತೀಶ್‌ಕುಮಾರ್, ನಗರಠಾಣೆ ಪಿಎಸ್ಐ ಶಂಕರಗೌಡ ಪಾಟೀಲ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT