ಮಂಗಳವಾರ, ಸೆಪ್ಟೆಂಬರ್ 28, 2021
21 °C

ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆಯು ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದಲ್ಲಿ ನಡೆಯಿತು.

ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪತ್ರಿಕಾ ವಿತರಕ ಪ್ರಮುಖರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ರಾಜ್ಯಾಧ್ಯಕ್ಷರಾಗಿ ಶಂಕರ್ ಧರ್ಮಣ್ಣ ಕುದರಿಮೋತಿ (ಗದಗ), ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕುಮಾರ್ ಹೊನಕೇರಿ (ಚಿಕ್ಕಮಗಳೂರು), ಗೌರವ ಅಧ್ಯಕ್ಷರಾಗಿ ಹಿರೇಮಟ್ ಸಿ.ಎಸ್. (ಹುಬ್ಬಳ್ಳಿ) ರಾಜ್ಯ ಉಪಾಧ್ಯಕ್ಷರಾಗಿ ಎ.ಎನ್ ಕೃಷ್ಣಮೂರ್ತಿ (ದಾವಣಗೆರೆ) ರಾಜ್ಯ ಸಹಕಾರ್ಯದರ್ಶಿಯಾಗಿ ಪರಶುರಾಮ್ ಕಾಳೇರ್ (ಹಾವೇರಿ) ಖಜಾಂಚಿಯಾಗಿ ಸತ್ಯನಾರಾಯಣ ಎಚ್.ವಿ. (ಶಿವಮೊಗ್ಗ) ಹಾಗೂ ನಿರ್ದೇಶಕರಾಗಿ ರಾಜು (ವಿಜಯನಗರ), ತಿಪ್ಪೆಸ್ವಾಮಿ ಎಸ್.(ಚಿತ್ರದುರ್ಗ), ಶ್ರೀನಿವಾಸ ದಿವಾಕರ್ ( ಬಳ್ಳಾರಿ), ಕೃಷ್ಣ(ಬೆಂಗಳೂರು), ಗಿರಿಧರ್ ದಿವಟೆ(ಹುಬ್ಬಳ್ಳಿ) ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು