ಗಾಂಜಾ ಮಾರಾಟ: ಐವರ ಸೆರೆ

ಶುಕ್ರವಾರ, ಜೂಲೈ 19, 2019
22 °C

ಗಾಂಜಾ ಮಾರಾಟ: ಐವರ ಸೆರೆ

Published:
Updated:

ದಾವಣಗೆರೆ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಐವರು ಆರೋಪಿಗಳನ್ನು ಸಿಇಎನ್‌ ಅಪರಾಧ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇಲ್ಲಿನ ಸರ್ವೋದರ ಸೊಸೈಟಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಇಎನ್‌ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜ್‌ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸ್ಥಳೀಯರಾದ ಪ್ರವೀಣ ಕುಮಾರ ಅಲಿಯಾಸ್‌ ಕುಮಾರ್‌ ಅಲಿಯಾಸ್‌ ಕುಮ್ಮಿ (28), ಯಾಸೀನ್‌ಬಿ ಅಲಿಯಾಸ್‌ ಬಡೇಬಿ (60), ಮೆಹಬೂಬಿ ಅಲಿಯಾಸ್‌ ಚೋಟಿಬಿ (57), ಜಗದೀಶ ಅಲಿಯಾಸ್‌ ಜಗ್ಗ (23), ಆಕಾಶ್‌ (20) ಅವರನ್ನು ಬಂಧಿಸಿದ್ದಾರೆ. ₹ 8,000 ಮೌಲ್ಯದ 330 ಗ್ರಾಂ ಗಾಂಜಾ, ಒಂದು ಆಟೋರಿಕ್ಷಾ, ಒಂದು ಬೈಕ್‌, ನಾಲ್ಕು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಮಹಿಳೆಯರಾದ ಬಡೇಬಿ ಮತ್ತು ಚೋಟಬಿ ಹಿಂದೆಯೂ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿವೆ. ಆಜಾದ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನ ಹತ್ಯೆ
ದಾವಣಗೆರೆ:
ಅಣಜಿಯಲ್ಲಿ ಮಂಗಳವಾರ ರಾತ್ರಿ ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಅಣಜಿ ಎ.ಕೆ. ಕಾಲೊನಿ ನಿವಾಸಿ ಆಂಜನೇಯ (22) ಕೊಲೆಯಾದವನು. ಬಾಬು ಎಂಬಾತ ಕೊಲೆ ಆರೋಪಿ. ಅಣಜಿ ಬಸ್‌ ನಿಲ್ದಾಣ ಬಳಿ ಆಂಜನೇಯ ಇರುವಾಗಿ ಬಾಬು ಇರಿದು ಪರಾರಿಯಾಗಿದ್ದಾನೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ
ದಾವಣಗೆರೆ:
ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಂದಿದ್ದ ಶಾಮನೂರಿನ ವ್ಯಕ್ತಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಮನೂರು ಗ್ರಾಮದ ಕೆ.ಎನ್‌. ರಘು (38) ಆತ್ಮಹತ್ಯೆ ಮಾಡಿಕೊಂಡವರು. ಆಸ್ತಿಯ ವಿಚಾರದಲ್ಲಿ 8 ವರ್ಷದ ಹಿಂದೆ ಅವರ ತಮ್ಮ ಕೆ.ಎನ್‌. ರವಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದರು. ಕೊಲೆ ಮಾಡಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಥೆ ಪಡುತ್ತಿದ್ದ ರಘು ಸೋಮವಾರ ರಾತ್ರಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಅವರ ಪತ್ನಿ ಬಿಂದು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !