ಶನಿವಾರ, ಜೂನ್ 19, 2021
26 °C

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾರ್ಟ್‌ ಸರ್ಕೀಟ್: ಉಪಕರಣಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು ಹಟ್ಟಿ (ಮಾಯಕೊಂಡ): ಮಾಯಕೊಂಡ  ಸಮೀಪದ ಆಲೂರು ಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿಹೊತ್ತಿಕೊಂಡು ಪೀಠೋಪಕರಣಗಳಿಗೆ ಹಾನಿಯಾಗಿದೆ.

ಮoಗಳವಾರ ಎಂದಿನಂತೆ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ಮುಗಿಸಿಕೊಂಡು ಆಸ್ಪತ್ರೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಬುಧವಾರ ಬೆಳಿಗ್ಗೆ ಆಸ್ಪತ್ರೆ ಕಿಟಕಿಯಿoದ ಹೊಗೆ ಬರುತ್ತಿರುವುದನ್ನು ಕoಡ ಗ್ರಾಮಸ್ಥರು ಸಿಬ್ಬಂದಿಗೆ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆ ಬೀಗ ತೆರೆದಾಗ ಔಷಧ, ಲಸಿಕೆ ಸಂಗ್ರಹಿಸಿಟ್ಟ ಫ್ರಿಡ್ಜ್ ಹಾಗೂ ಕುರ್ಚಿ ಬೆoಕಿಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ.

‘ಆಸ್ಪತ್ರೆಯ ವೈರಿಂಗ್‌, ವೈದ್ಯಕೀಯ ಉಪಕರಣಗಳು, ಫ್ರಿಡ್ಜ್, ಪೀಠೋಪಕರಣ ಸುಟ್ಟು ₹ 8 ಲಕ್ಷ ಹಾನಿಯಾಗಿದೆ. ಆಸ್ಪತ್ರೆಗೆ ಕೂಡಲೇ ಹೊಸದಾಗಿ ವಿದ್ಯುತ್ ಸಂಪರ್ಕ ಒದಗಿಸುವಂತೆ ಬೆಸ್ಕಾಂಗೆ ಪತ್ರ ಬರೆಯಲಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಸಲೀಂ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ್ ನಾಯ್ಕ, ಉಪಾಧ್ಯಕ್ಷ ಲಕ್ಷ್ಮೀ ವೆಂಕಟೇಶ ನಾಯ್ಕ, ಮುಖಂಡ ರಾಜುನಾಯ್ಕ, ಕಿರಣ್‌, ರಾಥೋಡ್ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.