ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆ ಮೂಲಕ ಸಮಾಜ ಪರಿವರ್ತನೆ ಸಾಧ್ಯ: ಪುರಸಭೆ ಮುಖ್ಯಾಧಿಕಾರಿ ಸುರೇಶ್‌

Published 8 ಜನವರಿ 2024, 6:05 IST
Last Updated 8 ಜನವರಿ 2024, 6:05 IST
ಅಕ್ಷರ ಗಾತ್ರ

ಮಲೇಬೆನ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೇವಲ ಸಾಲ ನೀಡುವ ಸಂಘಟನೆ ಅಲ್ಲ ಸಮಾಜ ಪರಿವರ್ತನೆ ಮಾಡುವ ಸಂಘ ಎಂದು ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ವೀರಭದ್ರೇಶ್ವರ ದೇವಾಲಯದ ಸಭಾಂಗಣದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ‘ವಲಯ ಮಟ್ಟದ ಸಾಧನಾ ಸಮಾವೇಶʼ ಉದ್ಘಾಟಿಸಿ ಮಾತನಾಡಿದರು.

ಸಂಘಟನೆ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಶಕ್ತಿ ನೀಡುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದೆ. ಸ್ವಸಹಾಯ ಗುಂಪುಗಳು ರಚನಾತ್ಮಕ ಕಾರ್ಯ ನಡೆಸುತ್ತಿವೆ. ಆರ್ಥಿಕ ಪ್ರಗತಿ ಸಾಧಿಸಿವೆ ಎಂದು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ಕರ್ತವ್ಯ ವೈದ್ಯಾಧಿಕಾರಿ ಡಾ.ಲಕ್ಷ್ಮೀದೇಬಿವಿ ಮಾತನಾಡಿ, ‘ಯೋಜನೆ ಸದಸ್ಯರು, ಸಿಬ್ಬಂದಿ ಸಮಾಜದ ಸುಧಾರಣೆ ಮಾಡುವ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದರು.

ಯೋಜನಾಧಿಕಾರಿ ವಸಂತ್‌ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ವೀರೇಶ್‌ ಅಧ್ಯಕ್ಷತೆ ವಹಿಸಿದ್ದರು. ಸಾಧನೆ ಮಾಡಿದ ಪ್ರಗತಿ ಬಂಧು ಸದಸ್ಯರನ್ನು ಸನ್ಮಾನಿಸಲಾಯಿತು. ಮುಖಂಡರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪಟೇಲ್‌ ಮಂಜುನಾಥ್‌, ಪುರಸಭೆ ಸದಸ್ಯ ಭಾನುವಳ್ಳಿ ಸುರೇಶ್‌, ಜಿಗಳಿ ಆನಂದಪ್ಪ, ಮಾಜಿ ಯೋಧರಾದ ಫಕೃದ್ದೀನ್‌, ರಾಜಾಭಕ್ಷಿ ಪೊಲೀಸ್‌ ವೆಂಕಟರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT