ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಕೈ ತೊಳೆಯುವ ಬೇಸಿನ್ ನಿರ್ಮಿಸಿಕೊಟ್ಟಿರುವ ಲಿಂಗತ್ವ ಅಲ್ಪಸಂಖ್ಯಾತೆ ಮಂಜಮ್ಮ
ಮಂಜಮ್ಮ ಅನೇಕ ಶಾಲೆಗಳಿಗೆ ನೆರವು ನೀಡಿದ್ದಾರೆ. ಆದರೆ ಹೇಳಿಕೊಳ್ಳುವುದಿಲ್ಲ. ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶ ಹೊಂದಿದ್ದು ನಾವೂ ಕೈಲಾದ ಸಹಾಯ ಮಾಡುತ್ತೇವೆ
ಎನ್.ಆರ್.ಗಿರೀಶ್ ಸವಳಂಗ ಗ್ರಾಮಸ್ಥ
ಭೀಕ್ಷೆಯಿಂದ ದಿನಕ್ಕೆ ₹ 2000ದಿಂದ ₹ 3000 ಸಂಗ್ರಹವಾಗುತ್ತದೆ. ಎರಡು ಹೊತ್ತು ಊಟ ಮಾಡುವೆ. ಇತರೆ ಖರ್ಚು ಕಳೆದು ಮಿಕ್ಕುವ ಹಣವನ್ನು ಸಮಾಜಕ್ಕೆ ವಿನಿಯೋಗಿಸುವೆ
ಮಂಜಮ್ಮ ಲಿಂಗತ್ವ ಅಲ್ಪಸಂಖ್ಯಾತೆ ಸವಳಂಗ
ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾದರಿ
ಮಂಜಮ್ಮ ಅವರು ಹೆಣ್ಣಾಗಲು ಬಯಸಿ 16ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಶಿವಮೊಗ್ಗಕ್ಕೆ ಬಂದರು. ಅಂಗಡಿಗಳಲ್ಲಿ ವೆಲ್ಡಿಂಗ್ ಮತ್ತು ನಿರ್ಮಾಣ ಕಾಮಗಾರಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಟೀಕೆ ಎದುರಿಸಬೇಕಾಯಿತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರನ್ನು ಆಪ್ತ ಸಮಾಲೋಚನೆ ಚಿಕಿತ್ಸೆ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದೆವು. ಈಗ ಮಂಜಮ್ಮ ನಮ್ಮ ಸಮುದಾಯದವರಿಗೆ ಮಾದರಿಯಾಗಿದ್ದಾರೆ ಎಂದು ಶಿವಮೊಗ್ಗದ ರಕ್ಷಾ ಸಮುದಾಯದ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಸೈಫುಲ್ಲಾ ತಿಳಿಸಿದರು.