ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್ ‍ಪಿಂಚಣಿದಾರರ ಮುಷ್ಕರ

Last Updated 17 ಡಿಸೆಂಬರ್ 2019, 10:59 IST
ಅಕ್ಷರ ಗಾತ್ರ

ದಾವಣಗೆರೆ: ಪಿಂಚಣಿ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬಿಎಸ್ಎನ್ಎಲ್ ದೂರಸಂಪರ್ಕ ಪಿಂಚಣಿದಾರರ ಸಂಘದ ಸದಸ್ಯರು ಪಿ.ಜೆ. ಬಡಾವಣೆಯ ದೂರಸಂಪರ್ಕ ಇಲಾಖೆ ಆವರಣದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.

ಸಂಘದ ರಾಜ್ಯ ಘಟಕದ ಆಧ್ಯಕ್ಷ ಈರಣ್ಣ ಮಾತನಾಡಿ, ‘ತ್ರೈಮಾಸಿಕ ಭತ್ಯೆ ₹ 3 ಸಾವಿರವನ್ನು ಒಂದು ವರ್ಷದಿಂದ ನೀಡಿಲ್ಲ. ವೈದ್ಯಕೀಯ ಬಿಲ್‌ಗಳ ಹಣವನ್ನು ಒಂದು ವರ್ಷದಿಂದ ತುಂಬಿಲ್ಲ. ಇದರಿಂದಾಗಿ ನಾವೇ ಹಣ ತುಂಬುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಿಲ್‌ಗಳ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಜ.1, 2017ರಿಂದ ಪಿಂಚಣಿ ಪರಿಷ್ಕರಣೆ ಆಗಿಲ್ಲ. ಕೂಡಲೇ ಪಿಂಚಣಿ ಪರಿಷ್ಕರಣೆ ಮಾಡಬೇಕು. ಕೇಂದ್ರ ಸರ್ಕಾರಿ ನೌಕರರಂತೆ ನಮಗೂ ಶೇ 15ರಷ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆಗಳು ಈಡೇರದಿದ್ದರೆ ಡಿ. 24ರಂದು ಸಹಿ ಚಳವಳಿ ನಡೆಸಿ ಪ್ರಧಾನಮಂತ್ರಿಗೆ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ತಹಶೀಲ್ದಾರ್, ಸಮಿತಿಯ ಸದಸ್ಯರಾದ ಎಸ್. ವೀರಭದ್ರಪ್ಪ, ಶರಣಪ್ಪ, ಎಚ್.ಬಿ. ಪ್ರಕಾಶ್, ಬಸವರಾಜ್ ಅತೋಡ್ಕರ್, ಬಿ.ಎನ್.ರೆಡ್ಡಿ, ಗಂಗಾಧರ್, ಇಸ್ಮಾಯಿಲ್, ನಾಗರಾಜ್, ಮಾಯಾಚಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT