ಭಾನುವಾರ, ಮಾರ್ಚ್ 26, 2023
24 °C
ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತ್ಯಾವಣಗಿ/ ಮಲೇಬೆನ್ನೂರು: ತ್ಯಾವಣಗಿ ಗ್ರಾಮದ ವಿದ್ಯಾರ್ಥಿಯೊಬ್ಬ ಮಲೇಬೆನ್ನೂರಿನ ಸಂಕ್ಲಿಪುರದ  ಮನೆಯೊಂದರಲ್ಲಿ ಪೇಂಟಿಂಗ್ ಮಾಡುತ್ತಿರುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.

ಸಾಗರ್ ಟಿ.ಎ.(18) ಮೃತ ವಿದ್ಯಾರ್ಥಿ. ತ್ಯಾವಣಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾದ ಈತ ಗ್ರಾಮದ ಅಣ್ಣಪ್ಪ ಹಾಗೂ ಅನಸೂಯಮ್ಮ ದಂಪತಿಯ ಪುತ್ರ.

ಭಾನುವಾರ ರಜೆ ಇದ್ದುದರಿಂದ ಸಂಕ್ಲಿಪುರ ಗ್ರಾಮಕ್ಕೆ ತೆರಳಿ ಮನೆಗೆ ಬಣ್ಣ ಬಳಿಯುವಾಗ ಮನೆಯ ಮೇಲೆ ಹರಿದಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಗಾಯಗೊಂಡ ರಾಮಪ್ಪ ಅವರ ಸ್ಥಿತಿ ಗಂಭೀರವಾಗಿದೆ ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು