ದಾವಣಗೆರೆ: ಹೆರಿಗೆಯ ನಂತರ ಬಾಣಂತಿ ಹಾಗೂ ಮಗುವನ್ನು ಮನೆಗೆ ಸುರಕ್ಷಿತವಾಗಿ ಸಾಗಿಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ‘ನಗು–ಮಗು’ ಆಂಬುಲೆನ್ಸ್ನ ಸರ್ವೀಸ್ ಮಾಡಿದ ಹಣ ಪಾವತಿಸದ ಕಾರಣ ಎರಡು ತಿಂಗಳಿನಿಂದ ಸರ್ವೀಸ್ ಸೆಂಟರ್ನಲ್ಲೇ ಉಳಿದಿದೆ.

ಆರು ತಿಂಗಳಿನಿಂದ ಕೆಟ್ಟು ನಿಂತಿದ್ದ ಆಂಬುಲೆನ್ಸ್ ಅನ್ನು ಫೆಬ್ರುವರಿ 2ರಂದು ರಿಪೇರಿ ಹಾಗೂ ಸರ್ವೀಸ್ಗಾಗಿ ಬಾಡ ಕ್ರಾಸ್ ಬಳಿ ಇರುವ ಪ್ರೇರಣಾ ಸರ್ವೀಸ್ ಸೆಂಟರ್ಗೆ ಬಿಡಲಾಗಿತ್ತು. ಸರ್ವೀಸ್ ಮುಗಿದ ಬಳಿಕ ಫೆ. 28ರಂದು ₹ 32 ಸಾವಿರ ಬಿಲ್ ನೀಡಲಾಗಿತ್ತು. ಆದರೆ ಸಿ.ಜಿ. ಆಸ್ಪತ್ರೆ ಬಿಲ್ ಪಾವತಿ ಮಾಡದೇ ಇರುವುದರಿಂದ ಆಂಬುಲೆನ್ಸ್ ಅಲ್ಲಿಯೇ ಉಳಿದಿದೆ.

ಆಸ್ಪತ್ರೆಯ ಯಾವುದೇ ವಾಹನಗಳ ಡೀಸೆಲ್ ಸೇರಿ ದುರಸ್ತಿಯ ಬಿಲ್ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರಿಗೆ ಶಾಖೆಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಪರಿಶೀಲಿಸಿದ ಬಳಿಕ ಸಿ.ಜಿ. ಆಸ್ಪತ್ರೆಗೆ ಬರಲಿದ್ದು, ಸಂಬಂಧಪಟ್ಟವರಿಗೆ ಪಾವತಿ ಮಾಡಲಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನಿಂದ ಇದಕ್ಕೆ ಹಣ ಬರುತ್ತದೆ. ಮಾರ್ಚ್ 24ರೊಳಗೆ ಬಿಲ್ ಕೊಡಬೇಕಿತ್ತು. ಆದರೆ ಬಿಲ್ ಕೊಡದೇ ಇರುವುದರಿಂದ ಇನ್ನೂ ಮೂರು ತಿಂಗಳು ಕಾಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಆಂಬುಲೆನ್ಸ್ 6 ತಿಂಗಳಿನಿಂದ ಕೆಟ್ಟುನಿಂತಿದೆ. ಆದರೆ ಸರ್ವೀಸ್ಗೆ ಬಿಟ್ಟಿದ್ದು ಎರಡು ತಿಂಗಳ ಹಿಂದೆ. 2019ರಲ್ಲಿ ಬ್ಯಾಟರಿ ಅಳವಡಿಸಲಾಗಿತ್ತು. ಈಗ ಮತ್ತೆ ಬ್ಯಾಟರಿ ಬದಲಾವಣೆ ಮಾಡಬೇಕು. ಏನೇ ಸಮಸ್ಯೆಗಳಿದ್ದರೂ ಕೇಳುವವರಿಲ್ಲ. ಆಂಬುಲೆನ್ಸ್ ಬಗ್ಗೆ ಜಿಲ್ಲಾ ಸರ್ಜನ್ ಕಾಳಜಿ ವಹಿಸಬೇಕು. ಬಿಲ್ ಮಾಡುವ ಸಂಬಂಧ ಕೇಸ್ ವರ್ಕರ್ ಹಾಗೂ ಚಾಲಕರ ನಡುವೆ ಜಗಳ ನಡೆದಿತ್ತು’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಹೇಳುತ್ತಾರೆ.

‘ಆಂಬುಲೆನ್ಸ್ಗೆ ಬ್ಯಾಟರಿ ಅಳವಡಿಸುವುದೂ ಸೇರಿ ಸರ್ವೀಸ್ ಮಾಡುವುದು ಇತ್ತು. ಬಿಲ್ ಮಾಡುವುದು ವಿಳಂಬವಾಗಿದ್ದರಿಂದ ವಾಹನ ತರಲು ಆಗಿಲ್ಲ. ನಾನ್ ಕೋವಿಡ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಹೆರಿಗೆ ಸ್ಥಗಿತಗೊಳಿಸಬೇಕು ಎಂಬ ಚಿಂತನೆಯಲ್ಲಿ ಇದ್ದೇವೆ’ ಎನ್ನುತ್ತಾರೆ ಚಿಗಟೇರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್.

ನವಜಾತ ಶಿಶುಗಳ ತುರ್ತು ಚಿಕಿತ್ಸೆಗೆ ಅವಶ್ಯ ಇರುವ ನಗು–ಮಗು ಆಂಬುಲೆನ್ಸ್ ರಿಪೇರಿಯಾದರೂ ವೆಚ್ಚ ಪಾವತಿ ಮಾಡಲು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ಕ್ರಮ ವಹಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು.
-ಎಂ.ಜಿ.ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತ

ಆಂಬುಲೆನ್ಸ್ ಸರ್ವೀಸ್ಗೆ ಬಂದಿತ್ತು. ಆಯಿಲ್ ಚೇಂಜ್ ಮಾಡುವುದು, ಸಸ್ಪೆನ್ಷನ್ ವರ್ಕ್, ನಿರ್ವಹಣೆ ಎಲ್ಲ ಸೇರಿ ₹ 32 ಸಾವಿರ ಬಿಲ್ ಬಂದಿದೆ. ಬಿಲ್ ಪಾವತಿಯಾಗದ ಕಾರಣ ಗಾಡಿಯನ್ನು ಕೊಟ್ಟಿಲ್ಲ.
-ನಾಗೇಶ್, ಮ್ಯಾನೇಜರ್, ಪ್ರೇರಣಾ ಮೋಟರ್ಸ್ ಸರ್ವೀಸ್

ಆಂಬುಲೆನ್ಸ್ ಸರ್ವೀಸ್ ಬಿಲ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೀಸ್ ಎಂಜಿನಿಯರ್ ಬಳಿಗೆ ಹೋಗಿದೆ. ಅಲ್ಲಿ ದೃಢೀಕೃತವಾದ ನಂತರ ಆಂಬುಲೆನ್ಸ್ ಅನ್ನು ತರುತ್ತೇವೆ.
-ಡಾ. ಜಯಪ್ರಕಾಶ್, ಜಿಲ್ಲಾ ಸರ್ಜನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.