ಶುಕ್ರವಾರ, ಮೇ 14, 2021
31 °C

ನಿವೃತ್ತ ಸ್ಟ್ಯಾಫ್ ನರ್ಸ್ ಮನೆಯಲ್ಲಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಿವೃತ್ತ ಸ್ಟ್ಯಾಫ್ ನರ್ಸ್ ಮನೆಗೆ ನುಗ್ಗಿದ ಕಳ್ಳರು ಮನೆಯ ವಾಲ್ ರೋಬ್‌ನಲ್ಲಿ ಇಟ್ಟಿದ್ದ ₹ 2.28 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಜಯನಗರ ‘ಎ’ ಬ್ಲಾಕ್ ನಿವಾಸಿ ಎಚ್.ಎಸ್‌. ರಾಧಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ರಾಧಾ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಏ.17ರಂದು ಕೊಟ್ಟೂರೇಶ್ವರ ಬಡಾವಣೆಯಲ್ಲಿ ಇರುವ ಸಾಕು ಮಗಳ ಮನೆಗೆ ಹೋಗಿದ್ದರು. ಎರಡು ದಿವಸದ ನಂತರ ವಾಪಸ್ ಬಂದು ನೋಡಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ವಾಲ್ ರೋಬ್ ಅನ್ನು ಆಯುಧದಿಂದ ಮೀಟಿ 15 ಗ್ರಾಂ ತೂಕದ ಬಂಗಾರದ ಸರ, 4 ಗ್ರಾಂ ತೂಕದ ಮಕ್ಕಳ ಬಂಗಾರದ ಸರ, ಬಂಗಾರದ ಓಲೆ, ಉಂಗುರ ಸೇರಿ ₹ 1.38 ಲಕ್ಷದ ಬಂಗಾರ ಹಾಗೂ ₹ 90 ಸಾವಿರ ಬೆಳ್ಳಿ ಆಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು