ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಸಾಗರ ನೀರಲ್ಲಿಲ್ಲ ಕಾಲರಾ ಅಂಶ

Published 16 ಆಗಸ್ಟ್ 2023, 22:45 IST
Last Updated 16 ಆಗಸ್ಟ್ 2023, 22:45 IST
ಅಕ್ಷರ ಗಾತ್ರ

ದಾವಣಗೆರೆ: ಕಲುಷಿತ ನೀರು ಸೇವನೆಯಿಂದಾಗಿ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ನಡೆದಿರುವ ದುರ್ಘಟನೆಗೆ ಕಾರಣವಾದ ಸೂಕ್ಷ್ಮಾಣು ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಶಾಂತಿಸಾಗರದ (ಸೂಳೆಕೆರೆ) ನೀರಿನಲ್ಲಿ ಕಂಡುಬಂದಿಲ್ಲ.

ಚನ್ನಗಿರಿ ತಾಲ್ಲೂನಲ್ಲಿರುವ ಶಾಂತಿಸಾಗರದಿಂದ ಈಚೆಗೆ ಕಲುಷಿತ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ 6 ಜಾಕ್‌ವೆಲ್‌ಗಳಿಂದ ನೀರಿನ ಮಾದರಿ ಸಂಗ್ರಹಿಸಿ ಶಿವಮೊಗ್ಗದ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ನೀರಿನಲ್ಲಿ ಸೂಕ್ಷ್ಮಾಣು ಇರುವುದಾಗಿ ವರದಿ ತಿಳಿಸಿತ್ತು.

ಸೂಕ್ಷ್ಮಾಣುವಿನ ವಿವರ ಪತ್ತೆಗಾಗಿ 2ನೇ ಹಂತದ ಪರೀಕ್ಷೆ ನಡೆಸಲಾಗಿದ್ದು, 5 ಜಾಕ್‌ವೆಲ್‌ಗಳ ಮಾದರಿಯಲ್ಲಿ ಯಾವುದೇ ಸೂಕ್ಷ್ಮಾಣು ಪತ್ತೆಯಾಗಿಲ್ಲ. ಒಂದರಲ್ಲಿ ‘ಹಿರೊಮೊನಸ್ ಸೊರ್ಬಿರಿಯಾ’ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

3ನೇ ಜಾಕ್‌ವೆಲ್‌ನಿಂದ ಪೂರೈಕೆಯಾಗುವ 2 ಸಂರಕ್ಷಣಾ ಘಟಕಗಳಲ್ಲಿ ಕ್ಲೊರಿನೇಷನ್ ಬಳಿಕ ನೀರಿನ ಮಾದರಿ ಸಂಗ್ರಹಿಸಿದಾಗ  ‘ಹಿರೊಮೊನಸ್ ಸೊರ್ಬಿರಿಯಾ’ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಎರಡು ಘಟಕಗಳಿಂದ ಒಟ್ಟು 31 ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿತ್ತು.

‘ಈ ಬ್ಯಾಕ್ಟೀರಿಯಾ ವಾಂತಿ–ಭೇದಿಗೆ ಕಾರಣವಾಗಬಲ್ಲದು. ಕ್ಲೋರಿನೇಷನ್ ಆಗಿದ್ದರಿಂದ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಚಿತ್ರದುರ್ಗ ಘಟನೆಗೆ ಶಾಂತಿಸಾಗರದ ನೀರಲ್ಲಿ ಕಂಡು ಬಂದ ಸೂಕ್ಷ್ಮಾಣು ಕಾರಣವಲ್ಲ. ಕವಾಡಿಗರಹಟ್ಟಿಯಲ್ಲಿ ಪೂರೈಕೆಯಾದ ನೀರಿನ ಮಾದರಿಯಲ್ಲಿ ಪತ್ತೆಯಾದ ಸೂಕ್ಷ್ಮಾಣು ಇಲ್ಲಿ ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT