ಬುಧವಾರ, ಫೆಬ್ರವರಿ 19, 2020
30 °C

ದುಗ್ಗಮ್ಮನ ಜಾತ್ರೆ ಹೆಸರಲ್ಲಿ ವಸೂಲಿ: ಮೂವರು ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದುಗ್ಗಮ್ಮನ ಜಾತ್ರೆಯ ಪಟ್ಟಿ ಎಂದು ಹೇಳಿಕೊಂಡು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಹೆಸರಲ್ಲಿ ಚಂದಾ ರಶೀದಿ ಪುಸ್ತಕವನ್ನು ಪ್ರಿಂಟ್‌ ಮಾಡಿಕೊಂಡು ಅಕ್ಕಿ, ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಆರ್‌ಎಂಸಿ ಪೊಲೀಸರು ಬಂಧಿಸಿದ್ದಾರೆ. ₹4,100 ನಗದು, ಒಂದು ರಶೀದಿ ಪುಸ್ತಕ, ಒಂದು ಆಟೊ ವಶಪಡಿಸಿಕೊಂಡಿದ್ದಾರೆ.

ಶಾಮನೂರು ಗ್ರಾಮದ ಗಿರೀಶ್‌ (33), ನಿಟುವಳ್ಳಿ ಮೌನೇಶ್ವರ ಬಡಾವಣೆಯ ಅಜಯ್‌ ಕುಮಾರ್‌ (33), ಶಾಮನೂರು ನಿಂಗರಾಜ್‌ (36) ಬಂಧಿತರು. ಅಂಜಿನಿ ಎಂಬಾತ ತಪ್ಪಿಸಿಕೊಂಡಿದ್ದಾನೆ. ಈ ಆರೋಪಿಗಳು ಬುಧವಾರ ಬಂಬೂ ಬಜಾರ್‌ ಬಾಲಾಜಿ ಪೆಟ್ರೋಲ್‌ ಬಂಕ್‌, ವಾಸು ಆಗ್ರೋ ಏಜೆನ್ಸಿ, ವಾಣಿ ಹೋಂಡಾ ಶೋರೂಂ, ಪ್ರಕಾಶ್‌ ಶೋರೂಂ, ಶ್ರೀಕೃಷ್ಣ ಏಜೆನ್ಸಿ ಮುಂತಾದ ಅಂಗಡಿಗಳಿಂದ ಅಕ್ಕಿ, ಹಣವನ್ನು ಬಲವಂತವಾಗಿ ವಸೂಲಿ ಮಾಡಿದ್ದರು. ಬಾಲಾಜಿ ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ ಚಂದ್ರಶೇಖರ್‌ ಈ ಬಗ್ಗೆ ದೂರು ನೀಡಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಗಜೇಂದ್ರಪ್ಪ ಕೆ.ಎನ್‌. ನೇತೃತ್ವದಲ್ಲಿ ಆರ್‌ಎಂಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು