ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಅಡಿಕೆ ಕಳವು ಮಾಡಿದ್ದ ಮೂವರನ್ನು ಚನ್ನಗಿರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಕಾರ್ತಿಕ್ ಎಚ್.ಎಸ್., ಚನ್ನಗಿರಿ ತಾಲ್ಲೂಕು ಕೆರೆಕಟ್ಟೆ ಗ್ರಾಮದ ಜಾವೀದ್ ಅಲಿ, ಹೊಸೂರು ಕೆರೆಬಿಳಚಿ ಗ್ರಾಮದ ಅಮೀರ್ ಖಾನ್ ಬಂಧಿತರು. ಆರೋಪಿಗಳಿಂದ 41 ಚೀಲ ಅಡಿಕೆ ಕಳ್ಳತನ ಮಾಡಿ ಮಾರಾಟ ಮಾಡಿ ಸಂಗ್ರಹಿದ್ದ ₹ 6.90 ಲಕ್ಷ ಹಾಗೂ ಕೃತ್ಯಕ್ಕೆ ಬಳಸಿದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ನಲ್ಲೂರಿನ ಮೊಹಮ್ಮದ್ ಜಾವೀದ್ ಅವರು ಕಳೆದ ಮಾರ್ಚ್ 3ರಂದು ತಮ್ಮ ಅಡಿಕೆ ಖೇಣಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳ್ಳತನವಾಗಿತ್ತು. ಈ ಸಂಬಂಧ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು.

ಎಎಸ್‌ಪಿ ಆರ್.ಬಿ.ಬಸರಗಿ, ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಸಂತೋಷ್ ಕೆ.ಎಂ., ಅವರ ಮಾರ್ಗದರ್ಶನದಲ್ಲಿ, ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಇ.ಎಸ್ ಇವರ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಪಿಎಸ್ಐ ಸೈಫುದ್ದೀನ್, ಎಎಸ್ಐ ಶಶಿಧರ ಎಚ್.ಎನ್., ಸಿಬ್ಬಂದಿ ರಂಗಪ್ಪ, ಬೀರೇಶ್ ಪುಟ್ಟಕ್ಕನವರ್, ಹರೀಶ್ ಕುಮಾರ್ ಜಿ.ಎಸ್ ಅವರನ್ನು ಎಸ್ಪಿ ಡಾ ಕೆ.ಅರುಣ್ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.