ಉಕ್ಕಡಗಾತ್ರಿ (ಕಡರನಾಯ್ಕನಹಳ್ಳಿ): ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.

ಬೆಳ್ಳಿ ರಥವನ್ನು ನಾನಾ ಪುಷ್ಪಗಳಿಂದ ಅಲಂಕರಿಸಿದ್ದರು. ಬಾಜ ಭಜಂತ್ರಿಗಳೊಂದಿಗೆ ಸ್ವಾಮೀಯ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಲಾಯಿತು. ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಜ್ಜಯ್ಯನಿಗೆ ಅಷ್ಟೋತ್ತರ ಮಹಾ ಪೂಜೆ ಸಲ್ಲಿಸಿದರು.

ನಂತರ ಶ್ರೀಗಳು ರಥಪೂಜೆ ಮಾಡಿದರು ಅಷ್ಟಬಲಿದಾನಗಳು ನೆಡೆದವು. ರಥದಗಾಲಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದರು.ಸ್ವಾಮೀಜಿಗಳು ಮತ್ತು ಟ್ರಸ್ಟ್ ಕಮಿಟಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು.ಕರಿಬಸವೇಶ್ವರ ಮಹಾರಾಜ್ ಕಿ ಜೈ ,ಭವರೋಗ ನಿವಾರಕ ಅಜ್ಜಯ್ಯ,ಹರಹರ ಮಹಾ ದೇವ ಎಂಬ ಘೋಷಣೆಯೊಂದಿಗೆ ಭಕ್ತರು ದೇವಸ್ಥಾನದ ಪ್ರಾಂಗಣದಲ್ಲಿ ಬೆಳ್ಳಿ ರಥವನ್ನು ಎಳೆದರು.ಬಾಜ ಭಜಂತ್ರಿಗಳು, ದೊಳ್ಳು ಕುಣಿತ, ವೀರಗಾಸೆ, ವೀರಭದ್ರ ದೇವರ ಒಡಪು ಮುಂತಾದವು ರಥೋತ್ಸವಕ್ಕೆ ಮೆರುಗು ತಂದವು.

ಬೆಳ್ಳಿ ರಥೋತ್ಸವ ಅಂಗವಾಗಿ ಅಜ್ಜಯ್ಯನಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ ಮಾಡಲಾಯಿತು. ವಿಶೇಷ ಪೂಜಾಲಂಕಾರ, ನಾನ ಪುಷ್ಪಗಳಿಂದ ಅಲಂಕರಿಸಲಾಗಿತ್ತು.ಆಪಾರ ಭಕ್ತರು ಬೆಳ್ಳಿ ರಥೋತ್ಸವದಲ್ಲಿ ಪಾಲ್ಗೊಂಡರು.

ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮತ್ತು ವಸತಿ ಸೌಲಭ್ಯವನ್ನು ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗೃತಾ ಕ್ರಮವಾಗಿ ಪೋಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ದೇವಸ್ಥಾನ ಕಮೀಟಿಯ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.