ಶುಕ್ರವಾರ, ಡಿಸೆಂಬರ್ 6, 2019
25 °C

ಚಕ್ರ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಪನಹಳ್ಳಿ: ರಾಜ್ಯ ಮಟ್ಟದ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಪರ್ಲ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕೆ. ವಿದ್ಯಾ ಅವರನ್ನು ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲೆಯ ವತಿಯಿಂದ ಶನಿವಾರ ಸನ್ಮಾನಿಸಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಗೆ ಪಟ್ಟಣದ ತೆಗ್ಗಿನಮಠದಲ್ಲಿ ವರಸದ್ಯೋಜಾತ ಶ್ರೀ ಚಾಲನೆ ನೀಡಿದರು. ಹೊಸ ಬಸ್ ನಿಲ್ದಾಣ, ಶಿರಿಸಪ್ಪ ಇಜಾರಿ ವೃತ್ತ, ಹಳೇ ಬಸ್ ನಿಲ್ದಾಣ ಮೂಲಕ ಐಬಿ ವೃತ್ತದವರಿಗೆ ಮೆರವಣಿಗೆ ನಡೆಸಲಾಯಿತು.

ತುಮಕೂರಿನಲ್ಲಿ ಸ್ಕೂಲ್ ಗೌರ್ವಮೆಂಟ್ ಫೆಡರೇಶನ್ ವತಿಯಿಂದ ಈಚೆಗೆ ನಡೆದ ಪಂದ್ಯಾವಳಿಯ ಚಕ್ರ ಎಸೆತ ವಿಭಾಗದಲ್ಲಿ ಕೆ. ವಿದ್ಯಾ 27.4 ಮೀಟರ್ ಚಕ್ರ ಎಸೆಯುವ ಮೂಲಕ ಹರ್ಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

 ಪ್ರಕೃತಿ ಶಿಕ್ಷಣ ಸಂಸ್ಥೆಯ ಚೇರಮನ್ ಕೆ.ವಿರೂಪಾಕ್ಷಪ್ಪ, ಪ್ರಾಚಾರ್ಯ ಸುಮಾ ಉಪ್ಪಿನ್, ಕಾರ್ಯದರ್ಶಿ ನಾಗೇಶ್ ಉಪ್ಪಿನ್, ನಿರ್ದೇಶಕ ಶಶಿಧರ ಪೂಜಾರ, ಪೂಜಾರ ಮಂಜುನಾಥ್, ಬಸವರಾಜ ಹುಲ್ಲತ್ತಿ, ಡಿ.ಚನ್ನೇಶ್, ಮಾಲತೇಶ್ ಚಳಿಗೇರಿ, ಗಿರೀಶ್, ದೈಹಿಕ ಶಿಕ್ಷಣ ಶಿಕ್ಷಕ ಜಯಕುಮಾರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು