ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಉಳಿಸಿಕೊಳ್ಳಲು ಮಾಸ್ಕ್ ಧರಿಸಿ

ಗಡಿಯಾರ ಕಂಬದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ
Last Updated 21 ಏಪ್ರಿಲ್ 2021, 5:34 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ನಮಗೋಸ್ಕರ ಮಾಸ್ಕ್ ಹಾಕಬೇಡಿ, ನಿಮ್ಮ ಪ್ರಾಣ ಉಳಿಸಿಕೊಳ್ಳಲು ಮಾಸ್ಕ್ ಹಾಕಿಕೊಳ್ಳಿ. ಇಲ್ಲದಿದ್ದರೆ ಕಳೆದ ಬಾರಿ ಅನುಭವಿಸಿದ ನೋವನ್ನೇ ವ್ಯಾಪಾರಿಗಳು ಮತ್ತೆ ಅನುಭವಿಸಬೇಕಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವತಿಯಿಂದ ನಗರದ ಗಡಿಯಾರ ಕಂಬದಿಂದ ಆರಂಭವಾದ ಮಾಸ್ಕ್ ಅಭಿಯಾನ ಮತ್ತು ಕೊರೊನಾ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ಕೆ.ಆರ್.ಮಾರುಕಟ್ಟೆಯ ಬಳಿ ಮಾತನಾಡಿ, ‘ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದು, ಆಟೊದವರು ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ದಂಡ ಹಾಕುವುದು ನಮ್ಮ ಉದ್ದೇಶವಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿ’ ಎಂದು ಸಲಹೆ
ನೀಡಿದರು.

ಡ್ರಂಸೆಟ್‌ನೊಂದಿಗೆ ಪಥಸಂಚಲನ ನಡೆಸಿದ ಸಿಬ್ಬಂದಿ ದಾರಿಯಲ್ಲಿ ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿ ‘ಪ್ರಾಣ ಉಳಿಸಿಕೊಳ್ಳಿ’ ಎಂದು ಹನುಮಂತರಾಯ ಮನವಿ ಮಾಡಿದರು.

ದಾವಣಗೆರೆ ಗಡಿಯಾರ ಕಂಬ ರಸ್ತೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜ ಪೇಟೆಯಲ್ಲಿ ಆಭಿಯಾನ ನಡೆದಿದ್ದು, ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಮಾಸ್ಕ್ ಧರಿಸಿರಲಿಲ್ಲ. ಪೊಲೀಸರು ಬರುತ್ತಾರೆ ಎಂದಾಕ್ಷಣ ಕೂಲಿ ಕಾರ್ಮಿಕರು ಟವಲ್ ಹಾಗೂ ಮಹಿಳೆಯರು ಸೀರೆ ಸೆರಗಿನಿಂದ ಮೂಗನ್ನು ಕಟ್ಟಿಕೊಂಡರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐ ತಿಮ್ಮಣ್ಣ, ಗಜೇಂದ್ರಪ್ಪ, ಶೈಲಜಾ, ಕಾನ್ಸ್‌ಟೆಬಲ್ ಪ್ರಶಾಂತ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT