ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಲ್ಲೂ ಒಂದಾದ ದಂಪತಿ: ಪತಿ ಸಾವಿನ ಸುದ್ದಿ ಕೇಳಿದ 10 ನಿಮಿಷದಲ್ಲೇ ಪತ್ನಿ ಸಾವು

Last Updated 27 ಡಿಸೆಂಬರ್ 2022, 5:00 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಎಸ್‌ಜಿಒ ಕಾಲೊನಿಯಲ್ಲಿ ಶನಿವಾರ ಪತಿಯ ಸಾವಿನ ಸುದ್ದಿ ಕೇಳಿದ 10 ನಿಮಿಷದಲ್ಲೇ ಪತ್ನಿಯೂ ಮೃತಪಟ್ಟಿದ್ದಾರೆ. ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.

ಕಾಲೊನಿಯ ಪಕ್ಕೀರಪ್ಪ ಗೋಖಾವಿ (83), ಚಂದ್ರಮ್ಮ ಗೋಖಾವಿ (70) ಮೃತಪಟ್ಟವರು.

ಅಂಗಡಿಗೆ ಹೋಗಿ ಬಂದಿದ್ದ ಪಕೀರಪ್ಪ ಮನೆಗೆ ಬಂದು ಎಲ್ಲರೊಂದಿಗೆ ಮಾತನಾಡಿದ್ದರು. ತಕ್ಷಣವೇ ಕುಸಿದು ಬಿದ್ದು, ಮೃತಪಟ್ಟರು. ಅವರ ಸಾವಿನ ಸುದ್ದಿ ಕೇಳಿದ ಪತ್ನಿ ಚಂದ್ರಮ್ಮ ಅವರೂ ಹತ್ತು ನಿಮಿಷದಲ್ಲೇ ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.

ಅವರಿಗೆ ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಶಾಮನೂರಿನ ರುದ್ರಭೂಮಿಯಲ್ಲಿ ಭಾನುವಾರ ಅಂತ‌್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT