ಮಂಗಳವಾರ, ಜನವರಿ 26, 2021
18 °C

ವಿಶ್ವ ಪವರ್‌ಲಿಫ್ಟಿಂಗ್‌ ಕೂಟಕ್ಕೆ ದಾವಣಗೆರೆಯ ಏಳು ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹಾರಾಷ್ಟ್ರದ ಅಮರಾವತಿಯಲ್ಲಿ ಡಿಸೆಂಬರ್ 4ರಿಂದ 7ರವರೆಗೆ ನಡೆಯುವ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದಾವಣಗೆರೆಯ ಏಳು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ದಾವಣಗೆರೆಯ ಸಾಯಿ ಜಿಮ್‌ನ ಎಫ್‌. ಇಸ್ಮಾಯಿಲ್ (ಸಬ್‌ ಜೂನಿಯರ್), ಗಣೇಶ್, ಮಂಜುನಾಥ್ (ಜೂನಿಯರ್), ಫಕ್ರುದ್ದೀನ್ ಸಿ. (ಮಾಸ್ಟರ್–2), ಲಕ್ಷ್ಮೀಕಾಂತ್ (ಮಾಸ್ಟರ್–3), ಬೀರೇಶ್ವರ ಶಾಲೆಯ ದಿವ್ಯಾ ಸಿ. (ಜೂನಿಯರ್) ಮತ್ತು ಚಂದ್ರಪ್ಪ (ಮಾಸ್ಟರ್–2) ಅವರು ಚಾಂಪಿಯನ್‌ಷಿಪ್‌ಗೆ ತೆರಳಲಿದ್ದಾರೆ. ಫಕ್ರುದ್ದೀನ್ ಸಿ. ಮೂರನೇ ಬಾರಿ ಅಂತರರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ರಾಜ್ಯ ಅಮೆಚೂರ್ ಪವರ್‌ಲಿಫ್ಟಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಾಯಿನಾಥ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಕಾರಣದಿಂದ ಚಾಂಪಿಯನ್‌ಷಿಪ್ ಮುಂದೂಡಲಾಗಿತ್ತು. 11 ದೇಶಗಳು ಪ್ರತಿನಿಧಿಸಬೇಕಿತ್ತು. ಈಗ ಆರರಿಂದ ಏಳು ದೇಶಗಳ ಕ್ರೀಡಾಪಟುಗಳು ಮಾತ್ರ ಭಾಗವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.