ಗುರುವಾರ , ಆಗಸ್ಟ್ 11, 2022
23 °C

ಜಮೀರ್‌ ಚಿಲ್ಲರೆ ಗುಜರಿ ಗಿರಾಕಿ: ರೇಣುಕಾಚಾರ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ಶಾಸಕ ಜಮೀರ್ ಅಹ್ಮದ್‌ ಅನೈತಿಕ ಚಟುವಟಿಕೆ ಮೂಲಕ ಹಣ ಗಳಿಸಿದ್ದಾನೆ. ಆತ ಒಬ್ಬ ಚಿಲ್ಲರೆ, ಗುಜರಿ ಗಿರಾಕಿ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.

ಹೊನ್ನಾಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡ್ರಗ್ಸ್‌ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ. ಜಮೀರ್ ದುಬೈ, ಶ್ರೀಲಂಕಾ ದೇಶಗಳಿಗೆ ಹೋಗಿ ಕ್ಯಾಸಿನೊಗಳಲ್ಲಿ ಭಾಗಿಯಾಗುತ್ತಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬರಲಿದೆ. ಜಮೀರ್ ಅನೈತಿಕ ಚಟುವಟಿಕೆಯಿಂದಲೇ ಆರ್ಥಿಕ, ರಾಜಕೀಯವಾಗಿ ಬೆಳೆದಿದ್ದಾರೆ’ ಎಂದು ಆರೋಪಿಸಿದರು.

‘ಡ್ರಗ್ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಮಟ್ಟ ಹಾಕಲಿದೆ. ಸ್ವತಂತ್ರವಾಗಿ ತನಿಖೆ ಮಾಡಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಹಿಂದಿನ ಸರ್ಕಾರಗಳ ವೈಫಲ್ಯದಿಂದಲೇ ಡ್ರಗ್ ಮಾಫಿಯಾ ಈ ಮಟ್ಟಕ್ಕೆ ಬೆಳೆದಿದೆ’ ಎಂದು ದೂರಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಭೇಟಿಯಲ್ಲಿ ರಾಜಕೀಯ ಕಾರಣ ಇರಲಿಲ್ಲ. ಅಭಿವೃದ್ಧಿಯ ವಿಚಾರ ಚರ್ಚೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು