ಹರಪನಹಳ್ಳಿ: ರಾಜ್ಯದ ಜ್ವಲಂತ ಸಮಸ್ಯೆಗಳ ಇತ್ಯರ್ಥ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ, ಸಮಸ್ಯೆಗಳಿಗೆ ಇತಿಶ್ರೀ ಹಾಡಿ, ಜನಜೀವನಮಟ್ಟ ಸುಧಾರಿಸಲು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದು ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ, ಬಿಎಸ್ಆರ್ ಕಾಂಗ್ರೆಸ್ನ ಸದಸ್ಯತ್ವ ನೋಂದಾಣಿ ಅಭಿಯಾನ ರಾಜ್ಯ ಘಟಕದ ಅಧ್ಯಕ್ಷ ಎಸ್. ಸಿರಾಜ್ ಷೇಕ್ ಹೇಳಿದರು.

ಪಟ್ಟಣದ ಪ್ರವಾಸಿಮಂದಿರ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಕ್ಷಣಗಳು ಆರಂಭವಾಗಿವೆ. ಬಿಜೆಪಿಯ ಶಾಸಕ, ಸಚಿವರು, ಬಿಜೆಪಿಯಲ್ಲಿ ಇರಬೇಕಾ? ಯಡಿಯೂರಪ್ಪ ಅವರ ಜತೆ ಹೋಗಬೇಕಾ? ಎಂಬ ಗೊಂದಲದಲ್ಲಿದ್ದಾರೆ. ಶೇ 90ರಷ್ಟು ಶಾಸಕ, ಸಚಿವರಿಗೆ ಸೋಲಿನ ಭೀತಿ ಆವರಿಸಿದೆ. ಹೀಗಾಗಿ, ಇದ್ದಷ್ಟು ದಿನ ಇಲ್ಲಿಯೇ ಇದ್ದರಾಯ್ತು ಎಂಬ ಭಾವನೆಯಲ್ಲಿದ್ದಾರೆ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಎ.ಜಿ. ವಿಶ್ವನಾಥ, ಶಂಕರನಹಳ್ಳಿ ಡಾ.ಉಮೇಶಬಾಬು, ಕಡಕೋಳ ನೂರುದ್ದೀನ್, ಎಚ್.ಎ. ವೇಣುಗೋಪಾಲ್, ಪುರಸಭಾ ಸದಸ್ಯ ಡಿ. ಜಾವೂರು, ನೀಲಗುಂದ ಶರಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.