ದಾವಣಗೆರೆ: ಮಾನವ ಕಳ್ಳಸಾಗಣೆ, ಹಫ್ತಾ ವಸೂಲಿ ಮಾಡುವವರ ಪಾಲಿಗೆ ಸಿಂಹಸ್ವಪ್ನವಾಗಿ, ದುಷ್ಟರ ರುಂಡ ಚೆಂಡಾಡುವ ತಮಿಳಿನ ‘ಸಿಂಗಂ’ ಚಿತ್ರ ವನ್ನು ನೀವು ನೋಡಿರಬಹುದು. ದಕ್ಷ ಪೊಲೀಸ್ ಅಧಿಕಾರಿಯೊಬ್ಬ ಸಮಾಜ ವನ್ನು ಸರಿದಾರಿಗೆ ತರುವ ಕತೆ ಆ ಚಿತ್ರದ್ದು.

ಇಂತಹದ್ದೇ ಕಥೆ ನೆರೆಯ ಕೇರಳದಲ್ಲಿಯೂ ಇದೆ. ಆದರೆ, ಅದು ಸಿನಿಮಾ ಕಥೆಯಲ್ಲ; ನಿಜ ಜೀವನದ ಕಥೆ. ಪ್ರಾಮಾಣಿಕ ಕೆಲಸ ಮತ್ತು ದಕ್ಷತೆಗೆ ಮಾನ್ಯತೆ ನೀಡುವ ಜನರ ನಡುವೆ ಕನ್ನಡದ ಹುಡುಗನೊಬ್ಬ ನಾಡಿಗೆ ಹೆಮ್ಮೆ ತರುವ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ.

ಅವರು ದಾವಣಗೆರೆಯ ಯತೀಶ್ ಚಂದ್ರ. ಎರ್ನಾಕುಲಂ ಜಿಲ್ಲೆಯ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ. ಜನರು ಪ್ರೀತಿಯಿಂದ ಅವರನ್ನು ‘ಕೇರಳ ಸಿಂಗಂ’ ಎಂದು ಕರೆಯುತ್ತಾರೆ. ಭ್ರಷ್ಟರನ್ನು ಸದೆಬಡಿಯುವ ಖಡಕ್ ಪೊಲೀಸ್ ಅಧಿಕಾರಿಯಾಗಿ ಅವರು ಅಲ್ಲಿ ಮನೆ ಮಾತಾಗಿದ್ದಾರೆ.

ಯತೀಶ್ಚಂದ್ರ ದಾವಣಗೆರೆ ವಿದ್ಯಾನಗರ ಬಡಾವಣೆಯ ಹಾಲಪ್ಪ ಮತ್ತು ಸಿದ್ಧಗಂಗಮ್ಮ ಅವರ ಪುತ್ರ. ಪ್ರಾಥಮಿಕ ಶಿಕ್ಷಣದಿಂದ ಪಿಯುವರೆಗೂ ನಗರದ ತರಳಬಾಳು ಶಾಲೆ, ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ನಂತರ, ಬಾಪೂಜಿ ತಾಂತ್ರಿಕ ಮಹಾ ವಿದ್ಯಾ ಲಯದಲ್ಲಿ ಬಿ.ಇ ಮೆಕ್ಯಾನಿಕಲ್ ಪದವಿ ಪಡೆದು ಕೆಲ ವರ್ಷಗಳ ಕಾಲ ಖಾಸಗಿ ಕಂಪೆನಿವೊಂದರಲ್ಲಿ ಕೆಲಸ ಮಾಡಿದರು.

2008ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ತಗೆದುಕೊಂಡರು. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಿರ್ಣರಾದ ಅವರು, ಮುಖ್ಯ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಎರಡನೇ ಅವಧಿಗೆ ಪ್ರಯತ್ನ ಮುಂದುವರಿಸಿ 2011ರಲ್ಲಿ ಐಪಿಎಸ್ ಶ್ರೇಣಿಗೆ ಆಯ್ಕೆಯಾದರು.

2011– 12ರವರೆಗೆ ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಕೇರಳದ ಕಣ್ಣೂರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿಯಾಗಿ ನೇಮಕ ಕೊಂಡರು.

ಭಾಷಾ ಕಲಿಕೆ: ಮೂರೇ ತಿಂಗಳಲ್ಲಿ ಮಲಯಾಳಂ ಕಲಿತ ಯತೀಶ್ ಚಂದ್ರ, ನಿರರ್ಗಳವಾಗಿ ಮಾತನಾಡುತ್ತಾರೆ. ಓದು, ಬರಹ ಕಲಿತು ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಜನರ ಸಮಸ್ಯೆ ಆಲಿಸಲು ಭಾಷೆ ಸಹಕಾರಿ ಎನ್ನುವ ಅವರು, ಸ್ಥಳೀಯ ಭಾಷೆ ಕಲಿಯುವುದು ಅಧಿಕಾರಿ ಕರ್ತವ್ಯ ಎನ್ನುತ್ತಾರೆ. ಭಾಷೆ ಕಲಿತಿರುವುದರಿಂದಲೇ ಜನರ ಮನಸ್ಸು ಮುಟ್ಟಲು ಸಾಧ್ಯವಾಗಿದೆ. ಸ್ಥಳೀಯ ರೊಂದಿಗೆ ಸಂವಹನ ನಡೆಸಲು ನೇರವಾಗಿ ಸಾಧ್ಯವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ದೂರುಗಳಿಗೆ ವೇದಿಕೆಯಾದ ನವಮಾಧ್ಯಮ: ಲಿಖಿತವಾಗಿ ದೂರು ಸಲ್ಲಿಸುವುದು ಸಾಮಾನ್ಯ ವಿಧಾನ. ಆದರೆ, ಫೇಸ್ ಬುಕ್, ವಾಟ್ಸ್ಪ್ ನಂತಹ ನವಮಾಧ್ಯಮಗಳನ್ನು ಬಳಿಸಿಕೊಂಡು ನೇರವಾಗಿ ಎಸ್.ಪಿಗೆ ದೂರು ಸಲ್ಲಿಸುವ ವಿಧಾನವನ್ನು ಯತೀಶ್ ಚಂದ್ರ ರೂಪಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳನ್ನು ಯಥೇಚ್ಛವಾಗಿ ಬಳ ಸುವ ಯುವ ಸಮೂಹ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ದೂರುದಾರರೊಂದಿಗೆ ನೇರ ಸಂಪರ್ಕಕ್ಕೆ ಲಭ್ಯವಾಗುವ ಯತೀಶ್ ಚಂದ್ರ, ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಹಾಗಾಗಿ ಜನ ಸಮುದಾಯ ಅವರನ್ನು ಇಷ್ಟಪಡುತ್ತಿದೆ ಎನ್ನುತ್ತಾರೆ ಅವರ ಬಾಲ್ಯ ಸ್ನೇಹಿತ ಡಾ.ಚಂದನ್ ಗಿರಿಯಪ್ಪ.

ಅಭಿಮಾನಿಗಳ ಸಂಘ: ಉತ್ತಮ ಸಂವಹನ ಕೌಲಶ ಹೊಂದಿರುವ ಅವರು, ಪ್ರತಿಭಟನೆ, ರಸ್ತೆ ಚಳವಳಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಪ್ರತಿಭಟನಾಕಾರರಿಗೂ ಕಸಿವಿಸಿಯಾಗ ದಂತೆ ಜಾಣ್ಮೆಯಿಂದ ನಿಭಾಯಿಸುತ್ತಾರೆ. ಇಂತಹ ಗುಣಗಳಿಂದಲೇ ಅವರ ಹೆಸರಿ ನಲ್ಲಿ ಅಭಿಮಾನಿಗಳ ಸಂಘ ಹುಟ್ಟಿ ಕೊಂಡಿದೆ.

ವಿದ್ಯಾರ್ಥಿಯಾಗಿದ್ದಾಗಲೇ ಓದಿನಲ್ಲಿ ಚುರುಕು ಮತ್ತು ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡಿದ್ದರಿಂದ ಈಗ ಒಳ್ಳೆಯ ಅಧಿಕಾರಿಯಾಗಿ ಹೆಸರು ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅವರ ಸಗುರು ತರಳಬಾಳು ಶಾಲೆ ಶಿಕ್ಷಕ ಮಧು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.