ಹೊನ್ನಾಳಿ : ಸೂರ್ಯನು ದಕ್ಷಿಣ ಪಥದಿಂದ ಉತ್ತರಾಭಿಮುಖವಾಗಿ ತನ್ನ ಪಥವನ್ನು ಬದಲಾಯಿಸಿ ಸಂಚರಿಸುವ ಪುಣ್ಯ ಪರ್ವ ಕಾಲವಾದ ಉತ್ತರಾಯಣ "ಮಕರ ಸಂಕ್ರಾಂತಿ ಹಬ್ಬ " ವನ್ನು ಗುರುವಾರ ಹೊನ್ನಾಳಿ ಸೇರಿದಂತೆ ತಾಲ್ಲೂಕಿನಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗುರುವಾರ ಸೂರ್ಯೋದಯವಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ಬಂದ ಜನರು ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲೆಡೆ ಕಂಡುಬಂತು. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಪ್ರಮುಖ ಹಬ್ಬವಾದ ಮಕರ ಸಂಕ್ರಮಣ ಹಬ್ಬದಲ್ಲಿ ಎಳ್ಳು-ಬೆಲ್ಲ ಬೀರುವುದು, ಮತ್ತು ಮಂಗಳಮಯ ಜೀವನಕ್ಕೆ ಶುಭ ಕೋರುವ ಸಂಪ್ರದಾಯ ನಡೆದು ಬಂದಿರುವುದು ಈ ಹಬ್ಬದ ಮತ್ತೊಂದು ವಿಶೇಷ.
ದೊಡ್ಡರಾದಿಯಾಗಿ ಮನೆಮಂದಿಯೆಲ್ಲಾ ಮನೆ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ, ಸಂಕ್ರಾಂತಿ ಕಾಳುಗಳನ್ನು ಕೊಟ್ಟು ಶುಭ ಕೋರುವ ಈ ಹಬ್ಬವೇ ಒಂದು ವಿಶೇಷ ಎಂದು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಹೆಬ್ಬಾರ್ ಹೇಳಿದರು. ಸುಗ್ಗಿ ಮತ್ತು ಸಮೃದ್ದಿಯ ಸಂಕೇತವಾದ ಸಂಕ್ರಾಂತಿ ಹಬ್ಬದ ದಿನ ವಿಶೇಷವಾಗಿ ರೈತರು ತಮ್ಮ ಜೀವನಾಡಿಗಳಾದ ಎತ್ತುಗಳಿಗೆ ಮೈ ತೊಳೆದು ಶೃಂಗರಿಸಿ ಪೂಜೆ ಸಲ್ಲಿಸುವ ಭಕ್ತಿ ಸಮರ್ಪಿಸಿದ್ದು ವಿಶೇಷ ಎಂದು ಹೇಳಿದರು.
ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಮನೆಯಲ್ಲಿ ತಯಾರಿಸಿದ್ದ ವಿವಿಧ ಬಗೆಯ ಎಳ್ಳುರೊಟ್ಟಿ, ಚಪಾತಿ, ವಿವಿಧ ಬಗೆಯ ಚಟ್ನಿಪುಡಿ, ಬೇಳೆ ಪಲ್ಯ, ರಾಗಿ ಕಿಲ್ಸಾ ಸೇರಿದಂತೆ ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ನದಿಯ ದಡ ಹಾಗೂ ಮಧ್ಯದಲ್ಲಿ ಕುಳಿತು ಸೇವಿಸಿದ್ದು ವಿಶೇಷ ಅನುಭವ ಎನ್ನುತ್ತಾರೆ ಜಗದೀಶ್ ಆಚಾರ್. ಇದೇ ಸಂದರ್ಭದಲ್ಲಿ ತಾಲ್ಲೂಕು ಪತಂಜಲಿ ಯೋಗಾ ಸಮಿತಿವತಿಯಿಂದ ನದಿಗೆ ವಿಶೆಷ ಪೂಜೆ ಸಲ್ಲಿಸಿದರು. ಬಳಿಕ ಕುಟುಂಬ ಸಮೇತರಾಗಿ ಅಹಾರ ಸೇವಿಸಿದ್ದು ವಿಶೇಷವಾಗಿತ್ತು.
ಪತಂಜಲಿ ಯೋಗ ಸಮಿತಿಯ ಪ್ರಮುಖರಾದ ರುದ್ರೇಶ್, ಅರುಣ್ಕುಮಾರ್, ಸುರೇಶ್ ಕುಂಬಾರ್, ರಾಘವೇಂದ್ರ ವೈಶ್ಯರ್, ದಿಲೀಪ್ ಮಾರ್ವಾಡಿ, ಅಂಬಿಕಾ ಹೆಬ್ಬಾರ್, ರವಿಕುಮಾರ್, ನರಸಿಂಹಪ್ಪ, ಗಿರೀಶ್ ಸೇರಿದಂತೆ ಪತಂಜಲಿಯ ಸಮಿತಿಯ ಸದಸ್ಯರು ಹಾಜರಿದ್ದರು.
1ಇಪಿ : ಹೊನ್ನಾಳಿ ತಾ ಪತಂಜಲಿ ಯೋಗ ಸಮಿತಿವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ತುಂಗಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.