ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯ

7
ಕೂಟಗಲ್: ಪಂಡಿತ್‌ ನೆಹರೂ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಾರಂಭ

ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯ

Published:
Updated:
Prajavani

ಕೂಟಗಲ್‌(ರಾಮನಗರ): ಯಾವುದೇ ಶಾಲೆಗಳ ಅಭಿವೃದ್ಧಿಗೆ ಆ ಶಾಲೆ ಹಳೇ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಕೂಟಗಲ್ ಗ್ರಾಮದಲ್ಲಿ ಕಣ್ವ ಗ್ರಾಮಾಂತರ ವಿದ್ಯಾಸಂಸ್ಥೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ನಡೆದ ಪಂಡಿತ್‌ ನೆಹರೂ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ನೆನಪು ಮಾಡಿಕೊಂಡು ಅದರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಲ್ಲಿನ ಶಿಕ್ಷಣ ಖಾಸಗಿ ಶಾಲೆಯನ್ನು ಮೀರಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವುದೇ ಶಾಲೆಗಳು ಸಮರ್ಪಕವಾಗಿ ನಡೆಯಬೇಕಾದರೆ ಅಲ್ಲಿನ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರ ಮುಖ್ಯ. ಹಳೆ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ತಾವು ಕಲಿತ ಶಾಲೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಕಲಿತುಕೊಳ್ಳಬೇಕು. ಪೋಷಕರು ಹೆಚ್ಚು ಅಂಕಗಳನ್ನು ಗಳಿಸುವಂತೆ ಒತ್ತಡ ಹೇರಬಾರದು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಶಾಸಕ ಎ.ಮಂಜುನಾಥ್‌ ಮಾತನಾಡಿ, ಪಂಡಿತ್‌ ನೆಹರೂ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಾರಂಭ ಆಚರಿಸುತ್ತಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲಾಗಬೇಕಾದ ವಿಚಾರವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಂಗಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್.ನಟರಾಜ್, ಸದಸ್ಯ ಎಸ್‌.ಬಿ. ಜಗದೀಶ್, ಕೂಟಗಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಚ್. ಮಮತಸಿದ್ದರಾಜು, ಸದಸ್ಯರಾದ ಸಿ. ಜಗದೀಶ್‌ ಕುಮಾರ್, ವಿಜಯ್‌ಕುಮಾರ್, ಕಣ್ವ ಗ್ರಾಮಾಂತರ ವಿದ್ಯಾ ಸಂಸ್ಥೆ ಸಂಸ್ಥಾಪಕ ಕೆ. ಪುಟ್ಟಸ್ವಾಮಿ, ಕಾರ್ಯದರ್ಶಿ ಡಿ. ಶಿವಲಿಂಗಯ್ಯ, ಉಪಾಧ್ಯಕ್ಷ ಎಸ್. ನಾಗರಾಜು, ಜಂಟಿ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣ, ಖಜಾಂಚಿ ಕೆ.ವಿ. ದೇವರಾಜು, ನಿರ್ದೇಶಕರಾದ ವಿ ಬೋರೇಗೌಡ, ಸಿ.ರಾಮಯ್ಯ, ಕೆ.ಆರ್.ವೀರೇಗೌಡ, ಎಂ.ಪರಮಶಿವಯ್ಯ, ಕೆ.ಎಂ.ಕರಿಯಪ್ಪ, ಎಚ್.ಕರಿಯಪ್ಪ, ರಾಮಚಂದ್ರಯ್ಯ, ಕೆ.ಸಿ. ಹನುಮಂತರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಸಿ.ಅಹಲ್ಯ, ಬಿ. ಜಯರಾಮಯ್ಯ, ದೇವರಾಜು, ಲಕ್ಷ್ಮೀನಾರಾಯಣ, ಎಸ್‌.ಟಿ. ಕಾಂತರಾಜ್ ಪಟೇಲ್, ಎಸ್. ನಾಗರಾಜು, ತ್ಯಾಗರಾಜ, ಕೆ.ಎಸ್. ಸಿದ್ದಲಿಂಗಪ್ಪ, ಹನುಮಪ್ಪ,, ಪಂಚಾಕ್ಷರಿ, ಆರ್. ಚಂದ್ರಪ್ಪ, ಡಿ.ಎಸ್. ನವೀನ್‌ಕುಮಾರ್, ಮುಖಂಡ ಪ್ರಾಣೇಶ್, ಡೊಳ್ಳು ಕಲಾವಿದ ಮಹೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !